Recent Posts

Monday, January 20, 2025
ಸಿನಿಮಾಸುದ್ದಿ

ಕರಾವಳಿಯಲ್ಲಿ ನವದುರ್ಗೆಯರದ್ದೇ ಹವಾ..! ; ಕ್ಯಾಮರಾ ಕಣ್ಣಲ್ಲಿ ವಿಶಿಷ್ಟ- ವಿಭಿನ್ನ ರೀತಿಯಲ್ಲಿ ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ, ರೂಪದರ್ಶಿ ಶ್ವೇತಾ ಸಂತೋಷ್ – ಕಹಳೆ ನ್ಯೂಸ್

ಮಂಗಳೂರು : ಕರಾವಳಿಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಕೊರೊನಾ ಎಫೆಕ್ಟ್ ನಿಂದಾಗಿ ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದಿದೆ. ಆದ್ರೆ ಅನೇಕ ಮಂದಿ ಕಲಾವಿದರು, ನಟ – ನಟಿಯರು ವಿಭಿನ್ನವಾಗಿ ದಸರಾ ಆಚರಿಸುತ್ತಿದ್ದಾರೆ.

ಎಸ್, ಹೌದು ನವದೇವಿಯರನ್ನು ಆರಾಧಿಸಿ ಸOತೃಪ್ತಗೊಳ್ಳುವ ಈ ಶುಭ ಸಂದರ್ಭದಲ್ಲಿ ಮಿಸ್ಸೆಸ್ ಕರ್ನಾಟಕ ಸುಪ್ರೀಂ 2019 ರ ವಿಜೇತೆ, 2020ರ ಮಿಸ್ಸೆಸ್ ಕರ್ನಾಟಕ ಸ್ಟೈಲ್ ಐಕಾನ್ ವಿಜೇತೆ, ನಟಿ, ರೂಪದರ್ಶಿ ಶ್ವೇತ ಸಂತೋಷ್ ವಿಭಿನ್ನವಾಗಿ ದೇವಿಯಾಗಿ ಕಾಣಿಸಿಕೊಂಡು ಎಲ್ಲರ ಕಣ್ಮನ ಸೆಳೆಯುತ್ತಿದ್ದಾರೆ. ನಟಿಯಾಗಿ ನಿರೂಪಕಿಯಾಗಿ ಮಾಡೆಲ್ಆಗಿ ಮನೆ ಮಾತಾಗಿದ್ದ ಶ್ವೇತ ಸಂತೋಷ್ ಇದೀಗ ದೇವಿಯಾಗಿ ಕಾಣಿಸಿ ಕಾಣಿಸಿಕೊಂಡಿದ್ದಾರೆ, ಹೆಣ್ಣಿನಲ್ಲಿ ನವ ದೇವಿಯರು ಅಡಕವಾಗಿರುತ್ತವೆ. ಹೆಣ್ಣು ಹಸಿವನ್ನು ನೀಗಿಸುವಾಗ ಅಣ್ಣಪೂರ್ಣೇಶ್ವರೀ ಯಾಗುತ್ತಾಳೆ , ತನಗೆ ತೊಂದರೆಯಾದಾಗ ಕಾಳಿಯಾಗಿ ಪರಿವರ್ತಿತಗೊಳ್ಳುತ್ತಾಳೆ ಎನ್ನುವ ಭಾವಗಳನ್ನು ಒಗ್ಗೂಡಿಸಿ ಪ್ರದರ್ಶಿಸುವಲ್ಲಿ ಯಶಶ್ವಿಯಾಗಿದ್ದಾರೆ…

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದ ಹಾಗೆ ಕನ್ನಡ ತುಳು ಚಲನಚಿತ್ರ ರಂಗದ ಪ್ರದೀಪ್ ಆಚಾರ್ಯ ಇವರ ಮೇಕಪ್ ಮತ್ತು ನ್ಯೂ ಪ್ರಕೃತಿ ಬ್ಯೂಟಿ ಲಾಂಜ್ ಇವರ ಕೇಶವಿನ್ಯಾಸ ದಲ್ಲಿ ಮೂಡಿಬಂದಿರುವ ಈ ಕೈಚಳಕವನ್ನು ಬಲೆ ತೆಲಿಪಾಲೆ ಖ್ಯಾತಿಯ ಪ್ರವೀಣ್ ಮರ್ಕಮೇ ( ಮರ್ಕಮೆ ಫೋಟೋಗ್ರಾಫಿ)ತನ್ನ ಕ್ಯಾಮರಾ ದಲ್ಲಿ ಮನಮೋಹಕ ವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿ ಯಾಗಿದ್ದಾರೆ. ಈಗ ಕರಾವಳಿಯಲ್ಲಿ ಇವರದ್ದೇ ಫೋಟೋಗಳ ಹವಾ ಜೋರಾಗಿದ್ದು, ಎಲ್ಲರ ಮೊಬೈಲ್ ಸೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

Photos :