Recent Posts

Monday, January 20, 2025
ಹೆಚ್ಚಿನ ಸುದ್ದಿ

ಸ್ಯಾನಿಟೈಸರ್ ಮಿಶ್ರಿತ ಮದ್ಯ ಸೇವಿಸಿ 5 ಮಂದಿ ಸಾವು, 3 ಮಹಿಳೆಯರು ಸೇರಿ 9 ಜನ ಗಂಭೀರ-ಕಹಳೆ ನ್ಯೂಸ್

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ನಲ್ಲಿ ಸ್ಯಾನಿಟೈಸರ್ ಮಿಶ್ರಣ ಮಾಡಿದ್ದ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಜಿ ಕೋಡ್ ನ ಚೆಲ್ಲನಕಾವು ಬುಡಕಟ್ಟು ಸಮುದಾಯದ ಕಾಲೋನಿಯಲ್ಲಿ ಘಟನೆ ನಡೆದಿದ್ದು ರಾಮನ್(52), ಅಯ್ಯಪ್ಪನ್(55) ಆತನ ಮಗ ಅರುಣ್(22), ಶಿವನ್(45) ಮತ್ತು ಆತನ ಸಹೋದರ ಮೂರ್ತಿ(33) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂವರು ಮಹಿಳೆಯರು ಸೇರಿದಂತೆ 9 ಮಂದಿಯ ಸ್ಥಿತಿ ಗಂಭೀರವಾಗಿದ್ದು ಪಾಲಕ್ಕಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಸ್ಯಾನಿಟೈಸರ್ ಮಿಶ್ರಿತವಾಗಿದ್ದ ಮದ್ಯವನ್ನು ಇವರು ಸೇವಿಸಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಭಾನುವಾರ ರಾಮನ್ ಸಾವನ್ನಪ್ಪಿದ್ದು ನಂತರದಲ್ಲಿ ಉಳಿದವರು ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಮದ್ಯ ಸೇವನೆಯ ನಂತರ ತೀವ್ರ ಅಸ್ವಸ್ಥರಾದ ನಾಲ್ವರು ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.