Friday, November 22, 2024
ಹೆಚ್ಚಿನ ಸುದ್ದಿ

ಹೆಲ್ಮೆಟ್ ಧರಿಸದಿದ್ದರೆ ಡಿಎಲ್ ಅಮಾನತು..!-ಕಹಳೆ ನ್ಯೂಸ್

ಸಾರ್ವಜನಿಕರೇ ಉದಾಸೀನ ಧೋರಣೆ ಬೇಡ. ಸರ್ಕಾರ ಎಷ್ಟೇ ನಿಯಮಗಳನ್ನು ಜಾರಿಗೊಳಿಸಲಿ ನಮಗೆ ನಮ್ಮ ಪ್ರಾಣ ಮುಖ್ಯವಾಗಿರುತ್ತದೆ. ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ನಾವು ಸುರಕ್ಷಿತವಾಗಿರುವುದರ ಜತೆಗೆ ನಮ್ಮ ಕುಟುಂಬದವರನ್ನೂ ಸುರಕ್ಷಿತವಾಗಿ ಇಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಲ್ಮೆಟ್ ಧರಿಸಿ ವಾಹನ ಚಲಾಯಿ ಸುವುದರಿಂದ ಅಪಘಾತಗಳಿಂದಾಗುವ ಪ್ರಾಣಾಪಾಯ ಗಳಿಂದ ಪಾರಾಗ ಬಹುದು. ಸರ್ಕಾರಗಳು ಈ ಬಗ್ಗೆ ಸಾಕಷ್ಟು ಜಾಗೃ ತಿ ಮೂಡಿಸಿದರೂ ಜನ ನಿರ್ಲಕ್ಷ್ಯ ಧೋರಣೆ ಅನುಸರಿಸುವುದರಿಂದ ದಂಡ ವಿಧಿಸುವ ಪ್ರಯೋಗ ಮಾಡುತ್ತಿದ್ದ ಸರ್ಕಾರ ಈಗ ಚಾಲನಾ ಪರವಾನಗಿಯನ್ನು ಮೂರು ತಿಂಗಳು ರದ್ದು ಮಾಡುವ ಕ್ರಮಕ್ಕೆ ಮುಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಿಚಕ್ರ ವಾಹನ ಚಾಲಕರೇ ಎಚ್ಚರ..! ಸ್ವಲ್ಪ ಯಾಮಾರಿ ಹೆಲ್ಮೆಟ್ ಧರಿಸದೆ ವಾಹನದೊಂದಿಗೆ ಹೊರ ಹೊರಟಿರೆಂದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸೀಜ್ ಆಗುತ್ತದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡೇ ವಾಹನವನ್ನು ಚಲಾಯಿಸಿ. ಇಲ್ಲದಿದ್ದರೆ ದಂಡದ ಜತೆಗೆ ನಿಮ್ಮ ಚಾಲನಾ ಪರವಾನಗಿ ಕೂಡ ಅಮಾನತಾಗಲಿದೆ. ರಾಜ್ಯದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ನಾಲ್ಕು ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸದವರಿಗೆ ದಂಡ, ಲೈಸೆನ್ಸ್, ಅಮಾನತುಗೊಳಿಸುವ ಶಿಕ್ಷೆ ಗ್ಯಾರಂಟಿ.

ಸುಪ್ರೀಂಕೋರ್ಟ್‍ನ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರವು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ನಾಲ್ಕು ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಅದರಂತೆ ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.

ಈ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸಾರ್ವಜನಿಕರು ಎಂದಿನಂತೆ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸಬೇಕು. ಇಲ್ಲದಿದ್ದರೆ ಲೈಸೆನ್ಸ್ ಸೀಜ್ ಆಗಿ ಮೂರು ತಿಂಗಳುಗಟ್ಟಲೆ ನೀವು ಬೈಕ್‍ಗಳನ್ನು ಓಡಿಸದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಚ್ಚರ..!ಸರ್ಕಾರ ಸುರಕ್ಷತೆ ಹಿನ್ನೆಲೆಯಲ್ಲಿ ನಿಯಮಗಳನ್ನು ಜಾರಿಗೊಳಿಸುತ್ತದೆ. ನಿಯಮ ಪಾಲನೆ ಮಾಡುವುದರಿಂದ ನಮ್ಮ ಪ್ರಾಣ ರಕ್ಷಣೆಯಾಗುತ್ತದೆ. ಸಾರ್ವಜನಿಕರು ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಇಂತಹ ಕ್ರಮಗಳನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ.

ಎಂದಿನಂತೆ ಹೆಲ್ಮೆಟ್ ಧರಿಸಿಕೊಂಡು ಗಾಡಿ ಚಲಾಯಿಸಿದರೆ ಇಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿರಲಿಲ್ಲ. ಹೆಲ್ಮೆಟ್ ಧರಿಸದೆ ಗಾಡಿ ಚಲಾಯಿಸುವವರಿಗೆ ಮೊದಲು 100ರೂ. ದಂಡ ವಿಧಿಸಲಾಗುತ್ತಿತ್ತು. ಜನ ಈ ದಂಡಕ್ಕೂ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ದಂಡದ ಪ್ರಮಾಣವನ್ನು ಸರ್ಕಾರ 500ರೂ.ಗೆ ಹೆಚ್ಚಿಸಿತ್ತು. ಆದರೂ ಜನರು ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ ಪರಿಣಾಮ ಈಗ ಚಾಲನಾ ಪರವಾನಗಿಯನ್ನೇ ರದ್ದು ಮಾಡುವ ಕ್ರಮಕ್ಕೆ ಮುಂದಾಗಿದೆ.
ಇನ್ನೂ ಜನ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಕಠಿಣ ಕ್ರಮ ಎದುರಿಸಬೇಕಾಗುತ್ತದೆ.