Recent Posts

Monday, January 20, 2025
ಬೆಳ್ತಂಗಡಿಶಿಕ್ಷಣಸುದ್ದಿ

ಬೆಳ್ತಂಗಡಿಯಲ್ಲಿ ‘ಮುಳಿಯ ಗಾನರಥ’ ಗ್ರ್ಯಾಂಡ್ ಫಿನಾಲೆ ; ಶ್ರುತಿ ಭಟ್ ಉಜಿರೆ, ಜಯಶ್ರೀ ಲಾಯಿಲ ಚಾಂಪಿಯನ್ಸ್‌ – ಕಹಳೆ ನ್ಯೂಸ್

ಬೆಳ್ತಂಗಡಿ : ಮುಳಿಯ ಜ್ಯುವೆಲ್ಸ್ ವತಿಯಿಂದ ಭಾನುವಾರ (ಅ.18) ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕರೋಕೆ ಗಾಯನ ಸ್ಪರ್ಧೆ ‘ಮುಳಿಯ ಗಾನರಥ’ ಗ್ರ್ಯಾಂಡ್‌ ಫಿನಾಲೆಯಲ್ಲಿ ಜ್ಯೂನಿಯರ್‌ ವಿಭಾಗದಲ್ಲಿ ಶ್ರುತಿ ಭಟ್‌ ಉಜಿರೆ ಹಾಗೂ ಸೀನಿಯರ್ ವಿಭಾಗದಲ್ಲಿ ಜಯಶ್ರೀ ಲಾಯಿಲ ಪ್ರಥಮ ಸ್ಥಾನ ಪಡೆದರು.

ಜೂನಿಯರ್ ವಿಭಾಗದಲ್ಲಿ ವಿಭಾ ನಾಯ್ಕ್‌ ಗೇರುಕಟ್ಟೆ ದ್ವಿತೀಯ, ರಕ್ಷನ್ ಜೆ. ರಾವ್ ಕನ್ಯಾಡಿ- ತೃತೀಯ ಸ್ಥಾನ ಗೆದ್ದರು. ಸೀನಿಯರ್ ವಿಭಾಗದಲ್ಲಿ ಸೌಜನ್ಯಾ ಎಸ್‌. ಉಜಿರೆ ದ್ವಿತೀಯ ಮತ್ತು ಶಿವಶಂಕರ್‌ ಗೇರುಕಟ್ಟೆ ತೃತೀಯ ಸ್ಥಾನ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿ ಮುಳಿಯ ಗಾನಕೋಗಿಲೆ ಸೀನಿಯರ್ ವಿಭಾಗದ ವಿಜೇತರಾದ ಜಯಶ್ರೀ ಲಾಯಿಲ
ಉದ್ಯಮದ ಜತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಮುಳಿಯ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಯಿಲ ಕ್ಷೇತ್ರದ ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.

ಗಾಯಕರಿರುವಲ್ಲಿಗೆ ಹೋಗಬೇಕು, ಅವರೊಳಗಿನ ಪ್ರತಿಭೆಯನ್ನು ಬೆಳೆಸಬೇಕು ಎಂಬ ಹಂಬಲದಿಂದ ಹೆಕ್ಕಿ ತೆಗೆಯಬೇಕು ಮುಳಿಯ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಮುಳಿಯದ ಚೇರ್‌ಮನ್‌ ಮತ್ತು ಆಡಳಿತ ನಿರ್ದೇಶಕ ಕೇಶವ ಪ್ರಸಾದ್‌ ಮುಳಿಯ ಹೇಳಿದರು.

 

‘ಮುಳಿಯ ಗಾನರಥ’ ಕಾರ್ಯಕ್ರಮವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸುವ ಯೋಜನೆಯಿದ್ದು, ಪುತ್ತೂರು, ಮಡಿಕೇರಿ, ಗೋಣಿಕೊಪ್ಪಲು ಮತ್ತು ಬೆಂಗಳೂರಿನಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ ಎಂದು ಅವರು ಪ್ರಕಟಿಸಿದರು.

ಮುಳಿಯ ಜ್ಯುವೆಲ್ಸ್‌ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮಾತನಾಡಿ, ಸ್ಪರ್ಧೆಗಾಗಿಯೇ ಹಾಡುವಂತಾಗಬಾರದು, ಹಾಡನ್ನು ಅರ್ಥೈಸಿ, ಶ್ರುತಿ, ಲಯಬದ್ಧವಾಗಿ ಹಾಡಿದಾಗ ಮಾತ್ರ ಉತ್ತಮ ಗಾಯಕರಾಗಲು ಸಾಧ್ಯ ಎಂದರು.

‘ಮುಳಿಯ ಗಾನರಥ’ದಲ್ಲಿ ಬೆಳ್ತಂಗಡಿ ತಾಲೂಕಿನ 6 ಕಡೆಗಳಲ್ಲಿ ಸುಮಾರು 400ಕ್ಕೂ ಅಧಿಕ ಸಂಗೀತ ಕಲಾವಿದರು ಭಾಗವಹಿಸಿದ್ದರು. ಅವರ ಪೈಕಿ 46 ಮಂದಿ ಸೆಮಿ ಫೈನಲ್ ಪ್ರವೇಶಿಸಿದ್ದರು. ಗ್ರ್ಯಾಂಡ್ ಫಿನಾಲೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ತಲಾ 7 ಮಂದಿ ಭಾಗವಹಿಸಿದ್ದರು.

ಗ್ರ್ಯಾಂಡ್‌ ಫಿನಾಲೆಯ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಕೊಯ್ಯೂರು ಭಾಗವಹಿಸಿದ್ದರು. ಮುಳಿಯ ಜ್ಯುವೆಲ್ಸ್‌ನ ಬೆಳ್ತಂಗಡಿ ಶಾಖೆಯ ಮುಖ್ಯಸ್ಥ ಗುರುರಾಜ ಸ್ವಾಗತಿಸಿ, ಉದಯಕುಮಾರ್ ಲಾಯಿಲ ಕಾರ್ಯಕ್ರಮ ನಡೆಸಿಕೊಟ್ಟರು. ಪುತ್ತೂರು ಮ್ಯಾನೇಜರ್‌ ಪ್ರವೀಣ ಬಿ., ಮಾರುಕಟ್ಟೆ ವಿಭಾಗದ ಸಹಾಯಕ ಪ್ರಬಂಧಕ ಸಂಜೀವ, ಸಿಬಂದಿಗಳಾದ ರಮೇಶ್, ದೀಪಿಕಾ, ನವೀನ್‌, ಜಯಂತ್ ಸಹಕರಿಸಿದರು.