Recent Posts

Friday, November 22, 2024
ಹೆಚ್ಚಿನ ಸುದ್ದಿ

ಬದಲಾಗಲಿದೆ ಸಿಲಿಂಡರ್ ವಿತರಣೆ ವ್ಯವಸ್ಥೆ – ನವೆಂಬರ್ 1 ರಿಂದಲೇ ಹೊಸ ನಿಯಮ ಜಾರಿ-ಕಹಳೆನ್ಯೂಸ್

ನವದೆಹಲಿ: ನವೆಂಬರ್ ನಿಂದ ಸಿಲಿಂಡರ್ ವಿತರಣೆ ನಿಯಮದಲ್ಲಿ ಬದಲಾವಣೆಯಾಗಲಿದೆ. ಗ್ರಾಹಕರಿಗೆ ಸಿಲಿಂಡರ್ ಗಳನ್ನು ಸಮರ್ಪವಾಗಿ ತಲುಪಿಸಲು ತೈಲ ಕಂಪನಿಗಳು ನವೆಂಬರ್ 1 ರಿಂದ ಹೊಸ ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿವೆ. ದೇಶೀಯ ಸಿಲಿಂಡರ್ ಕಳ್ಳತನವನ್ನು ತಡೆಯುವ ಉದ್ದೇಶ ಕೂಡ ಇದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹೊಸ ವ್ಯವಸ್ಥೆಯನ್ನು ಡಿಎಸಿ ಅಂದರೆ ಡೆಲಿವರಿ ದೃಢೀಕರಣ ಕೋಡ್ ಎಂದು ಕರೆಯಲಾಗುತ್ತಿದೆ. ಸಿಲಿಂಡರ್ ಬುಕ್ ಆದ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕೋಡ್ ಕಳುಹಿಸಲಾಗುತ್ತದೆ. ಡೆಲಿವರಿ ಬಾಯ್ ಮನೆಗೆ ಬಂದಾಗ ಕೋಡ್ ತೋರಿಸಬೇಕು. ನಂತರದಲ್ಲಿ ಡೆಲಿವರಿ ಬಾಯ್ ಸಿಲಿಂಡರ್ ಮನೆಗೆ ನೀಡಲಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಬೈಲ್ ಸಂಖ್ಯೆ ನವೀಕರಿಸದ ಗ್ರಾಹಕರಿದ್ದರೆ, ಡೆಲಿವರಿ ಬಾಯ್ ಬಳಿ ಅಪ್ಲಿಕೇಷನ್ ಇರುತ್ತದೆ. ಅದರಲ್ಲಿ ಅಪ್ಡೇಟ್ ಮಾಡುವ ಮೂಲಕ ಕೋಡ್ ಪಡೆಯಬೇಕಾಗುತ್ತದೆ. ವಿಳಾಸ ತಪ್ಪಾಗಿರುವ ಅಥವಾ ಮೊಬೈಲ್ ನಂಬರ್ ತಪ್ಪಾಗಿರುವ ಸಂದರ್ಭದಲ್ಲಿ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. ತೈಲ ಕಂಪನಿಗಳು ಸದ್ಯ 100 ಸ್ಮಾರ್ಟ್ ಸಿಟಿಗಳಲ್ಲಿ ಈ ಯೋಜನೆ ಜಾರಿಗೆ ತರಲಿವೆ. ನಂತರದಲ್ಲಿ ಬೇರೆ ನಗರಗಳಿಗೆ ಇದನ್ನು ವಿತರಿಸುವ ಯೋಜನೆ ಇದೆ.