Monday, November 25, 2024
ಹೆಚ್ಚಿನ ಸುದ್ದಿ

RBIನಿಂದ 8 ವರ್ಷಗಳ ನಂತ್ರ ‘ಎಟಿಎಂ ವಿತ್ ಡ್ರಾ ನಿಯಮ’ದಲ್ಲಿ ಬದಲಾವಣೆ – ಕಹಳೆ ನ್ಯೂಸ್

ನವದೆಹಲಿ : ಈಗಾಗಲೇ ಗ್ರಾಹಕರ ಸ್ನೇಹಿ ನಿಯಮಗಳನ್ನು ರೂಪಿಸಿರುವಂತ ಭಾರತೀಯ ರಿಸರ್ವ್ ಬ್ಯಾಂಕ್, ಮತ್ತೊಂದು ಮಹತ್ವದ ಬದಲಾವಣೆಯನ್ನು 8 ವರ್ಷಗಳ ಬಳಿಕ ಮಾಡಲು ಹೊರಟಿದೆ. ಎಟಿಎಂ ವಿತ್ ಡ್ರಾ ಮೇಲಿನ ವರ್ಗಾವಣೆ ನಿಯಮದಲ್ಲಿ ಬದಲಾವಣೆ ತರಲು ಹೊರಟಿದ್ದು, ಬ್ಯಾಂಕ್ ಗ್ರಾಹಕರು 5000 ಸಾವಿರಕ್ಕಿಂತ ಹೆಚ್ಚು ಹಣ ಡ್ರಾಮಾಡಿಕೊಂಡಾಗ ವಿಧಿಸಲಾಗುತ್ತಿದ್ದಂತ ಶುಲ್ಕದಿಂದ ವಿನಾಯಿತಿ ನೀಡುವ ನಿಯಮದಲ್ಲಿ ಬದಲಾವಣೆಗೆ ಮುಂದಾಗಿದೆ. ಈ ಮೂಲಕ ಎಟಿಎಂ ಬಳಕೆದಾರರಿಗೆ ಗುಡ್ ನ್ಯೂಸ್ ಸದ್ಯದಲ್ಲಿಯೇ ನೀಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಟಿಎಂನಿಂದ 5000 ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಿದರೆ, ಈ ಮೊತ್ತಕ್ಕೆ ನೀವು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಎಂಟು ವರ್ಷಗಳ ನಂತರ ಎಟಿಎಂ ವಿತ್ ಡ್ರಾ ನಿಯಮಬದಲಿಸಲು ಸಿದ್ಧತೆ ಗಳನ್ನು ಮಾಡಲಾಗುತ್ತಿದೆ. ಈ ಹೊಸ ನಿಯಮವು ಎಟಿಎಂಗಳಿಂದ ತಿಂಗಳಿಗೆ ಐದು ಬಾರಿ ಉಚಿತ ಹಣ ಪಡೆಯುವುದಕ್ಕೆ ಅನ್ವಯಿಸುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

5 ಸಾವಿರಕ್ಕಿಂತ ಹೆಚ್ಚು ವಿತ್ ಡ್ರಾವಲ್ ಗಳಿಗೆ 24 ರೂ.

ಮಾಧ್ಯಮವರದಿಗಳ ಪ್ರಕಾರ, ಎಟಿಎಂನಿಂದ 5000 ರೂಪಾಯಿಗಿಂತ ಹೆಚ್ಚು ಹಣ ವನ್ನು ಹಿಂತೆಗೆದುಕೊಳ್ಳಲು ಗ್ರಾಹಕರು ಹೆಚ್ಚುವರಿ 24 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಎಟಿಎಂಗಳಿಂದ ನಗದು ವಿತ್ ಡ್ರಾ ಮಾಡುವ ನಿಯಮಗಳ ಪ್ರಕಾರ, ತಿಂಗಳಿಗೆ ಐದು ಬಾರಿ ಹಣ ಡ್ರಾ ಮಾಡಬಹುದು. ಒಂದು ವೇಳೆ ಒಂದು ತಿಂಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ನಗದು ಹಿಂತೆಗೆತ ಮಾಡಿದರೆ, ಆರನೇ ವಿತ್ ಡ್ರಾಗೆ 20 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಇಂತಹ ಹೆಚ್ಚವರಿ ವಿತ್ ಡ್ರಾ ಶುಲ್ಕವನ್ನು ರದ್ದು ಪಡಿಸಲು ಇದೀಗ ಆರ್ ಬಿ ಐ ಮುಂದಾಗಿದೆ.

ಆರ್ ಬಿಐ ಸಮಿತಿಯ ಶಿಫಾರಸು

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸಮಿತಿ ಮಾಡಿರುವ ಶಿಫಾರಸುಗಳ ಆಧಾರದ ಮೇಲೆ ಎಟಿಎಂಗಳಿಂದ ಹಣ ಡ್ರಾ ಮಾಡುವ ನಿಯಮವನ್ನು ಬದಲಿಸಲಾಗಿದೆ. ಆದರೆ, ಸಮಿತಿಯ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಅಡಿಯಲ್ಲಿ ಕೇಳಲಾದ ಮಾಹಿತಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಆರ್ ಬಿಐಗೆ ವರದಿ ಸಲ್ಲಿಕೆಯಾಗಿತ್ತು

ಆರ್ ಬಿಐನ ಎಟಿಎಂ ಶುಲ್ಕ ದಬಗ್ಗೆ ಪರಿಶೀಲಿಸಲು ರಚಿಸಲಾದ ಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ. ಇದನ್ನು ಆಧರಿಸಿ, ಎಂಟು ವರ್ಷಗಳ ನಂತರ ಬ್ಯಾಂಕ್ ಗಳು ಎಟಿಎಂ ಶುಲ್ಕವನ್ನು ಬದಲಾಯಿಸಬಹುದು. ಆರ್ ಟಿಐ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ನಗದು ಹಿಂತೆಗೆತವನ್ನು ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಸಮಿತಿ ಸಲಹೆ ನೀಡಿದೆ. ನಗದು ಹಿಂಪಡೆಯುವ ಅಭ್ಯಾಸ ವನ್ನು ಸರಳಗೊಳಿಸಲು ಭಾರತೀಯ ಬ್ಯಾಂಕುಗಳ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಜಿ.ಕಣ್ಣನ್ ನೇತೃತ್ವದ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ಅವರು 2019ರ ಅಕ್ಟೋಬರ್ 22ರಂದು ರಿಸರ್ವ್ ಬ್ಯಾಂಕ್ ಗೆ ಸಲ್ಲಿಸಿದರು. ಆದರೆ, ಅದನ್ನು ಬಹಿರಂಗಪಡಿಸಿರಲಿಲ್ಲ. ಆರ್ ಟಿಐ ಕಾರ್ಯಕರ್ತ ಶ್ರೀಕಾಂತ್ ಎಲ್ ಆರ್ ಟಿಐ ಮೂಲಕ ಆರ್ ಬಿಐನಿಂದ ಮಾಹಿತಿ ಕೇಳಿದ್ದರು. ಇದಕ್ಕಿ ಉತ್ತರಿಸಿರುವ ಆರ್ ಬಿ ಐ ಎಟಿಎಂ ಶುಲ್ಕ ಕಡಿತದ ಸಮಿತಿಯ ಶಿಫಾರಸ್ಸನ್ನು ಬಹಿರಂಗ ಪಡಿಸಿದೆ.

ಒಟ್ಟಾರೆಯಾಗಿ ಒಂದು ತಿಂಗಳಿನಲ್ಲಿ ಐದು ಬಾರಿಗಿಂತ ಹೆಚ್ಚು ಬಾರಿ ಹಣವನ್ನು ಎಟಿಎಂ ನಿಂತ ವಿತ್ ಡ್ರಾ ಮಾಡಿಕೊಳ್ಳಲಾಗುತ್ತಿದ್ದರೇ ಯಾವುದೇ ಶುಲ್ಕವಿಲ್ಲ. ಆದ್ರೇ ಆರನೇ ಬಾರಿ ಹಣ ವಿತ್ ಡ್ರಾ ಮಾಡಿದಾಗ ಪ್ರತಿ ಹಣ ವಿತ್ ಡ್ರಾಗೂ ರೂ.20 ಶುಲ್ಕವನ್ನು ಬ್ಯಾಂಕ್ ಗಳು ವಿಧಿಸುತ್ತಿವೆ. ಇದಲ್ಲದೇ 5000ಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಿದಾಗಲೂ ಹೆಚ್ಚುವರಿ ರೂ.24 ಶುಲ್ಕವನ್ನು ವಿಧಿಸಲಾಗುತ್ತಿದೆ. ಇಂತಹ ಶುಲ್ಕವನ್ನು ರದ್ದು ಪಡಿಸಲು ಇದೀಗ ಆರ್ ಬಿ ಐ ಮುಂದಾಗಿದೆ. ಈ ಮೂಲಕ ಎಟಿಎಂ ಬಳಕೆದಾರರಿಗೆ ಗುಡ್ ನ್ಯೂಸ್ ಸದ್ಯದಲ್ಲಿಯೇ ನೀಡಲಿದೆ.