Saturday, November 23, 2024
ಹೆಚ್ಚಿನ ಸುದ್ದಿ

ಬಜಾಜ್ ಫೈನಾನ್ಸ್ ಲಾಭ 965 ಕೋಟಿ ರೂಪಾಯಿಗೆ ಕುಸಿತ -ಕಹಳೆ ನ್ಯೂಸ್

ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬಜಾಜ್ ಫೈನಾನ್ಸ್ ನಿವ್ವಳ ಲಾಭದಲ್ಲಿ ಇಳಿಕೆ ಆಗಿದೆ. ಈ ಬಗ್ಗೆ ಕಂಪೆನಿ ಬುಧವಾರ ಘೋಷಣೆ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬಜಾಜ್ ಫೈನಾನ್ಸ್ 1506 ಕೋಟಿ ರೂಪಾಯಿ ಲಾಭ ಮಾಡಿತ್ತು. ಈ ಬಾರಿ ಅದು 965 ಕೋಟಿ ರೂಪಾಯಿಗೆ ಕುಸಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಲದ ಮೇಲೆ ನಷ್ಟ ಹಾಗೂ FY21 Q2ಗೆ ಪ್ರಾವಿಷನ್ 1700 ಕೋಟಿ ಇಡಲಾಗಿದೆ. FY20 Q2ನಲ್ಲಿ 594 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಬಜಾಜ್ ಫೈನಾನ್ಸ್ Q2 ಫಲಿತಾಂಶದ ಪ್ರಮುಖಾಂಶಗಳು ಹೀಗಿವೆ:

ಜಾಹೀರಾತು
ಜಾಹೀರಾತು
ಜಾಹೀರಾತು

* ಹೊಸ ಸಾಲ Q2 FY21ನಲ್ಲಿ 3.62 ಮಿಲಿಯನ್ ಹಾಗೂ Q2 FY20ಯಲ್ಲಿ 6.47 ಮಿಲಿಯನ್ ಇತ್ತು.

* ಗ್ರಾಹಕರ ಫ್ರಾಂಚೈಸ್ 30 ಸೆಪ್ಟೆಂಬರ್ 2020ಕ್ಕೆ 44.11 ಮಿಲಿಯನ್ ಹಾಗೂ 30 ಸೆಪ್ಟೆಂಬರ್ 2019ರಲ್ಲಿ 38.70 ಮಿಲಿಯನ್ ಇತ್ತು.

* ನಗದು ಹೆಚ್ಚಳ 30 ಸೆಪ್ಟೆಂಬರ್ 2020ಕ್ಕೆ₹22,414 ಕೋಟಿ ಹಾಗೂ 30 ಸೆಪ್ಟೆಂಬರ್ 2019ಕ್ಕೆ ₹8,107 ಕೋಟಿ.
* ನಿವ್ವಳ ಬಡ್ಡಿ ಆದಾಯ Q2 FY21 4% ಹೆಚ್ಚಳವಾಗಿ ₹4,165 ಕೋಟಿ ತಲುಪಿದೆ. Q2 FY20 ₹4,000 ಕೋಟಿ ಇತ್ತು.

* Q2 FY21 ಕಾರ್ಯ ನಿರ್ವಹಣೆ ವೆಚ್ಚ 16% ಇಳಿದು ₹1,160 ಕೋಟಿ ಆಗಿದೆ. ಅದು ₹1,384 ಕೋಟಿ ಇತ್ತು.

* ಸಗಟು NPA ಮತ್ತು ನಿವ್ವಳ NPA 30ನೇ ಸೆಪ್ಟೆಂಬರ್ 2020ಕ್ಕೆ ಕ್ರಮವಾಗಿ 1.03% ಮತ್ತು 0.37% ಇದ್ದರೆ, 30 ಸೆಪ್ಟೆಂಬರ್ 2019ರ ಅವಧಿಗೆ ಇದು 1.61% ಮತ್ತು 0.65% ಇತ್ತು.