Recent Posts

Sunday, January 19, 2025
ಉಡುಪಿಸುದ್ದಿ

ಮಲ್ಪೆ ಮೀನುಗಾರರ ಬಲೆಗೆ ಬಿತ್ತು 750 ಕೆ.ಜಿ ತೂಕದ ಮೀನು -ಕಹಳೆ ನ್ಯೂಸ್

 ಉಡುಪಿ ಜಿಲ್ಲೆ ಮಲ್ಪೆಯ ಸರ್ವ ಋತು ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಬಲೆಗೆ ಬೀಳುವುದುಂಟು. ಕೆಲವೊಮ್ಮೆ ಭಾರೀ ಗಾತ್ರದ ಮೀನುಗಳು ಬಲೆಗೆ ಬಿದ್ದರೆ, ಇನ್ನು ಕೆಲವೊಮ್ಮೆ ಅಪರೂಪದ, ವಿಚಿತ್ರ ಮೀನುಗಳು ಸಿಕ್ಕಿ ಗಮನ ಸೆಳೆಯುತ್ತವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಮಲ್ಪೆ ಮೀನುಗಾರರಿಗೆ ಬುಧವಾರ ಸಿಕ್ಕ ಮೀನು ಮಾತ್ರ ಬಲು ಅಪರೂಪವಾಗಿದ್ದು ಮಾತ್ರವಲ್ಲ, ಗಾತ್ರದಲ್ಲೂ ದಾಖಲೆ ನಿರ್ಮಿಸಿದೆ. ಈ ಮೀನನ್ನು ಕರಾವಳಿಗರು ತೊರಕೆ ಮೀನು ಎನ್ನುತ್ತಾರೆ. ಬಹಳ ರುಚಿಯಾದ ಮೀನಿದು, ಇಂದು ಸಿಕ್ಕಿದ ಮೀನು ಬರೋಬ್ಬರಿ ಏಳುನೂರಾ ಐವತ್ತು ಕೆ.ಜಿಯದ್ದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಲ್ಪೆಯ ನಾಗಸಿದ್ದಿ ಎಂಬ ಹೆಸರಿನ ಬೋಟ್ ನವರಿಗೆ ಈ ಮೀನು ದೊರೆತಿದ್ದು, ಇದರ ತೂಕ ಬರೋಬ್ಬರಿ 750 ಕೆ.ಜಿ ಇತ್ತು. ಹೀಗಾಗಿ ಕ್ರೇನ್ ಮೂಲಕ ಮೀನನ್ನು ಮೇಲೆತ್ತಲಾಯಿತು. ಇತ್ತೀಚಿನ ವರ್ಷಗಳಲ್ಲಿ ಬಲೆಗೆ ಬಿದ್ದ ಅತಿ ದೊಡ್ಡ ತೊರಕೆ ಮೀನು ಇದಾಗಿದೆ.
ಇದನ್ನು ನೋಡಲು ಮಲ್ಪೆ ಬಂದರಿಗೆ ಮೀನು ಪ್ರಿಯರು ಭಾರೀ ಸಂಖ್ಯೆಯಲ್ಲಿ ಲಗ್ಗೆ ಹಾಕಿದರು. ಈ ಹಿಂದೆಯೂ ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬಲು ಅಪರೂಪದ ಉದ್ದನೆಯ ಮೀನು ಸಿಕ್ಕಿತ್ತು.