Saturday, November 23, 2024
ಹೆಚ್ಚಿನ ಸುದ್ದಿ

ರಾಜ್ಯದಲ್ಲಿ ‘ಆನ್ ಲೈನ್ ಶಿಕ್ಷಣ’ದಿಂದ ವಿದ್ಯಾರ್ಥಿಗಳ ಕಣ್ಣಿಗೆ ತೊಂದರೆ : ಇಂದೇ ‘ಮಾರ್ಗಸೂಚಿ’ ರಿಲೀಸ್ – ಸಚಿವ ಸುರೇಶ್ ಕುಮಾರ್-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದಾಗಿ ಆನ್ ಲೈನ್ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಕಲಿಕೆ ಮುಂದುವರೆಸಲಾಗಿದೆ. ಆದ್ರೇ ವಿದ್ಯಾರ್ಥಿಗಳು ಆನ್ ಲೈನ್ ತರಗತಿಗೆ ಹಾಜರಾಗುತ್ತಿರುವುದರಿಂದ ಅವರುಗಳು ಕಣ್ಣಿನ ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ತಜ್ಞರು ನೀಡಿರುವ ವರದಿ ಹಾಗೂ ಸಲಹೆಗಳ ಆಧಾರ ಮೇಲೆ, ಸರ್ಕಾರ ಇಂದೇ ಆನ್ ಲೈನ್ ಶಿಕ್ಷಣದ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ರಾಜ್ಯದಲ್ಲಿ ನಡೆಯುತ್ತಿರುವ ಆನ್ ಲೈನ್ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳ ಕಣ್ಣಿಗೆ ಹೆಚ್ಚಾಗಿ ತೊಂದರೆಯಾಗುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿರುತ್ತದೆ.
ಆನ್ ಲೈನ್ ಶಿಕ್ಷಣ ಮಾರ್ಗದರ್ಶಿಯನ್ನು ತಜ್ಞರು ನೀಡಿರುವ ವರದಿ ಹಾಗೂ ಸಲಹೆಗಳ ಆಧಾರದ ಮೇರೆಗೆ ಸಿದ್ಧಪಡಿಸಲಾಗಿದೆ. ಸದರಿ ಮಾರ್ಗದರ್ಶಿ ಹಾಗೂ ವರದಿಯ ಆಧಾರ ಮೇರೆಗೆ, ರಾಜ್ಯದ ಎಲ್ಲಾ ಶಾಲೆಗಳು ಆನ್ ಲೈನ್ ಶಿಕ್ಷಣವನ್ನು ನಡೆಸುವಂತೆ ವಿವರವಾದ ಸುತ್ತೋಲೆಯನ್ನು ಇಂದೇ ಹೊರಡಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ. ಹೀಗಾಗಿ ಇಂದೇ ಆನ್ ಲೈನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು