Sunday, January 19, 2025
ಸುದ್ದಿ

ಕರಾವಳಿಯ ಸಂಪ್ರದಾಯಿಕ ಖಾದ್ಯ ನೀರು ದೋಸೆ, ಫಿಶ್ ಕರಿಯ ರುಚಿ ಸವಿದ ರಾಹುಲ್

ಕಾಪು : ಕರಾವಳಿಯ ಉಭಯ ಜಿಲ್ಲೆಯಲ್ಲಿ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲೆಂದು, ಸುಮಾರು 11.30 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಹೆಲಿಕಾಪ್ಟರ್‌ ಮೂಲಕ ಕಾಪುವಿನತ್ತ ತೆರಳಿದ್ದಾರೆ.

ಅಲ್ಲಿನ ತೆಂಕ ಎರ್ಮಾಳಿನಲ್ಲಿ ಮೀನುಗಾರರೊಂದಿಗೆ ಸಮಾಲೋಚನೆ ನಡೆಸಿದ ಅವರು ಮೀನುಗಾರರ ಕುಂದು ಕೊರತೆಗಳನ್ನು ಅಲಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ, ಕನ್ನಡದಲ್ಲಿ ಮೀನುಗಾರರು ತಮ್ಮ ಸಂಕಷ್ಟಗಳನ್ನು ವಿವರಿಸುತ್ತಿದ್ದಾಗ ಅದನ್ನು ಸಚಿವ ಪ್ರಮೋದ್ ಮಧ್ವರಾಜ್ ಅವರು ಹಿಂದಿಗೆ ಹಾಗೂ ರಾಹುಲ್ ಅವರ ಮಾತುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಕರಾವಳಿಯ ಸಂಪ್ರದಾಯಿಕ ಖಾದ್ಯ ನೀರು ದೋಸೆ, ಫಿಶ್ ಕರಿಯ ರುಚಿ ಸವಿದ ರಾಹುಲ್ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ ಡಾ.ಜಿ ಪರಮೇಶ್ವರ್, ಸಚಿವ ಪ್ರಮೋದ್ ಮಧ್ವರಾಜ್ ಸಾಥ್ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು