ಡ್ರಗ್ಸ್ ಪ್ರಕರಣ :ಗಂಡು ಅಥವಾ ಹೆಣ್ಣು ಕೈದಿಗಳ ಸೆಲ್ಗೆ ಹಾಕೋದಾ? ಪಾಷಾ ಹೇಳಿಕೆ ಕೇಳಿ ಅಧಿಕಾರಿಗಳು ಶಾಕ್!-ಕಹಳೆ ನ್ಯೂಸ್
ಬೆಂಗಳೂರು: ಮಾದಕ ವಸ್ತು ಜಾಲದ ನಂಟಿನ ಹಿನ್ನೆಲೆಯಲ್ಲಿ ಬಿಗ್ಬಾಸ್ ಖ್ಯಾತಿಯ ಆಯಡಮ್ ಪಾಷಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪಾಷಾರನ್ನು ನ್ಯಾಯಾಂಗ ಬಂಧನಕ್ಕೆ ಕರೆದೊಯ್ದಾಗ ಭಾರಿ ಹೈಡ್ರಾಮ ನಡೆದಿದೆ.
ಜೈಲಿನಲ್ಲಿ ಆರೋಪಿ ಪಾಷಾನನ್ನು ಯಾವ ಸೆಲ್ಗೆ ಹಾಕಬೇಕೆಂಬ ಗೊಂದಲದ ಜತೆಗೆ ಭಾರಿ ಚರ್ಚೆಯಾಗಿದೆ. ಈ ವೇಳೆ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ, ಯುವತಿಯರ ವಸ್ತ್ರಗಳನ್ನು ಧರಿಸುತ್ತೇನಷ್ಟೆ, ಕಾರಣ ನಾನೊಬ್ಬ ಡ್ರ್ಯಾಗ್ ಕ್ವೀನ್ ಎಂದು ಪಾಷಾ ವಾದಾ ಮಾಡಿದ್ದಾರೆ.
ಆದರೆ, ಪಾಷಾರನ್ನು ಗಂಡು ಕೈದಿಗಳ ಸೆಲ್ಗೆ ಹಾಕೋದಾ? ಅಥವಾ ಹೆಣ್ಣು ಕೈದಿಗಳ ಸೆಲ್ಗೆ ಹಾಕೋದಾ? ಎಂದು ಜೈಲಾಧಿಕಾರಿಗಳು ಕೆಲ ಕಾಲ ಗೊಂದಲಕ್ಕೀಡಾಗಿದ್ದರು. ಮಂಗಳಮುಖಿಯರ ಸೆಲ್ಗೆ ಹಾಕೋದು ಕೂಡ ಕಷ್ಟವಾಗಿದೆ. ಆಯಡಮ್ ಪಾಷಾ ನಾನು ಮಂಗಳಮುಖಿಯಲ್ಲ ಎಂದು ಹೇಳಿದ್ದಾನೆ.
ಕೊನೆಗೆ ಆಯಡಮ್ ಪಾಷಾನನ್ನು ಪ್ರತ್ಯೇಕ ಸೆಲ್ನಲ್ಲಿ ಇರಿಸಿರುವುದಾಗಿ ಪರಪ್ಪನ ಅಗ್ರಹಾರ ಜೈಲು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.