Saturday, November 23, 2024
ಸುದ್ದಿ

ಕಾರಿಂಜಕ್ಕೆ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿ ಮಜಾಮಾಡಲು ಪ್ರಯತ್ನಿಸಿದ ಇರ್ಫಾನ್ ಮತ್ತು ನಜೀಮ್ ಗೆ ಬಿತ್ತು ಗೂಸ – ಕಹಳೆ ನ್ಯೂಸ್

ಪುಂಜಾಲಕಟ್ಟೆ : ರಿಕ್ಷಾ ಚಾಲಕರಿಬ್ಬರು ಸೋಮವಾರ, ಶಾಲಾ ವಿದ್ಯಾರ್ಥಿನಿಯರನ್ನು ಕಾರಿಂಜ ಗುಡ್ಡಕ್ಕೆ ಕರೆದೊಯ್ದು ಅನುಮಾನಸ್ಪದವಾಗಿ ವರ್ತಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಥಳಿಸಿ ಪುಂಜಾಲಕಟ್ಟೆಯ ಪೊಲೀಸರಿಗೊಪ್ಪಿಸಿದ್ದಾರೆ. ರಿಕ್ಷಾ ಚಾಲಕರಾದ ಎನ್.ಸಿ.ರೋಡ್‍ನ ಇರ್ಫಾನ್ ಮತ್ತು ಇರ್ವತ್ತೂರ್‍ನರಿನ ನಝೀಮ್ ಆರೋಪಿಗಳು.

ಸ್ಥಳೀಯ ಕಾಲೇಜೊಂದರ ಐವರು ವಿದ್ಯಾರ್ಥಿನಿಯರು ಪ್ರತಿದಿನ ಇರ್ಫಾನ್ ಎಂಬವರ ರಿಕ್ಷಾದಲ್ಲಿ ಮಡಂತ್ಯಾರಿಗೆ ಸಂಜೆ ಟ್ಯೂಷನ್‍ಗೆ ತೆರಳುತ್ತಿದ್ದರು. ಎಂದಿನಂತೆ ಸೋಮವಾರವೂ ತೆರಳಿದ್ದರು. ಆದರೆ ಟ್ಯೂಷನ್ ಬಳಿಕ ಅದೇ ರಿಕ್ಷಾದಲ್ಲಿ ಇನ್ನೊಬ್ಬ ಯುವಕ ನಝೀಮ್ ಎಂಬಾತನ ಜೊತೆ ಸೇರಿ ವಿದ್ಯಾರ್ಥಿನಿಯರನ್ನು ಕಾರಿಂಜಕ್ಕೆ ಕರೆದೊಯ್ದಿದ್ದ. ಅಲ್ಲಿ ವಿದ್ಯಾರ್ಥಿನಿಯರು ಯುವಕರಿಬ್ಬರೊಂದಿಗೆ ಸೆಲ್ಫಿ ತೆಗೆಯುತ್ತಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಗಮನಿಸಿದ ಸ್ಥಳೀಯರು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಬಾರದ ಹಿನ್ನಲೆಯಲ್ಲಿ ಚಾಲಕರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪುಂಜಾಲಕಟ್ಟೆ ಠಾಣಾಧಿಕಾರಿ ಸುದರ್ಶನ್ ಹಾಗೂ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರ ಹೆತ್ತವರನ್ನು ಕರೆಸಿ, ಬುದ್ಧಿ ಮಾತು ಹೇಳಿ ಕಳುಹಿಸಲಾಗಿದೆ. ರಿಕ್ಷಾ ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ವೇಳೆ ಸುದ್ದಿ ತಿಳಿಯತ್ತಿದ್ದಂತೆ ಪುಂಜಾಲಕಟ್ಟೆ ಠಾಣೆಗೆ ಜನ ಜಮಾಯಿಸತೊಡಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು