Sunday, January 19, 2025
ಬಂಟ್ವಾಳ

ಬಂಟ್ವಾಳದ ಮಿನಿವಿಧಾನಸೌಧಕ್ಕೆ ನಾಗದೋಷ; ಜನಪ್ರತಿನಿಧಿಗಳಿಂದ ನಡೆಯಿತು ವಿಶೇಷ ಪೂಜೆ ಪುನಸ್ಕಾರ-ಕಹಳೆ ನ್ಯೂಸ್

ಬಂಟ್ವಾಳ : ವ್ಯಕ್ತಿಯ ಜಾತಕದಲ್ಲಿ ನಾಗದೋಷ ಇದೆ ಎಂದು ಪೂಜೆ ಪುನಸ್ಕಾರ ಮಾಡಿಸುವುದು ಸಾಮಾನ್ಯ. ಆದರೆ, ಇಲ್ಲಿನ ಸರ್ಕಾರಿ ಕಟ್ಟಡಕ್ಕೆ ನಾಗದೋಷ ಇದೆ ಎಂದು ಜನಪ್ರತಿನಿಧಿಗಳು ಸೇರಿ ವಿಶೇಷ ಹೋಮ ಮಾಡಿಸಿರುವ ಘಟನೆ ನಡೆದಿದೆ. ನಗರದ ಬಿಸಿ ರೋಡ್​ನಲ್ಲಿರುವ ಈ ಆಡಳಿತ ಕಚೇರಿ ಕಟ್ಟಿ ಇನ್ನು ಮೂರು ವರ್ಷವಾಗಿದೆ.

ಆದರೆ, ಈ ಕಚೇರಿಗೆ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದರಂತೆ. ಅಲ್ಲದೇ ಕೆಲ ಅಧಿಕಾರಿಗಳು ಅಕಾಲಿಕ ಮರಣಕ್ಕೂ ತುತ್ತಾಗಿದ್ದಾರೆ. ಕಚೇರಿಯಲ್ಲಿ ಹೀಗೆ ಅಧಿಕಾರಿಗಳು ಒಮ್ಮಿಂದೊಮ್ಮೆಲೆ ಸಂಕಷ್ಟಕ್ಕೆ ಗುರಿಯಾಗುತ್ತಿರುವುದನ್ನು ಕಂಡು ಜನಪ್ರತಿನಿಧಿಗಳಿಗೆ ಅಚ್ಚರಿಯಾಗಿದೆ. ಒಳಿಕ ಕಟ್ಟಡದ ವಾಸ್ತುದೋಷದ ತೊಂದರೆ ಇರಬೇಕು ಎಂದು ಈ ಕುರಿತು ಜೋತಿಷಿಗಳ ಸಂಪರ್ಕಕ್ಕೆ ಒಳಗಾಗಿದ್ದಾರೆ. ಈ ವೇಳೆ ಕಟ್ಟಡಕ್ಕೆ ನಾಗದೋಷ ಇರುವ ಸಂಗತಿ ಬಯಲಾಗಿದೆ. ಈ ಹಿನ್ನಲೆ ಕಟ್ಟಡಕ್ಕೆ ನಾಗದೋಷ ಪರಿಹಾರ ಪೂಜೆ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿತ್ಯವೂ ಜನಜಂಗುಳಿಯಿಂದ ಕೂಡಿರುವ ಈ ಮಿನಿ ವಿಧಾನಸೌಧದಲ್ಲಿ ಒಂದಲ್ಲ ಒಂದು ಸಮಸ್ಯೆ ತಪ್ಪಿಲ್ಲ. ಇಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಮಸ್ಯೆ ಆಗುತ್ತಲೇ ಇತ್ತು.ಕಳೆದ ಸಪ್ಟೆಂಬರ್ ತಿಂಗಳಲ್ಲಿ ಇದೇ ತಾಲೂಕು ಕಚೇರಿಯ ಇಬ್ಬರು ಉಪತಹಶೀಲ್ದಾರ್ ಗಳು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಯಾವ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ ಹೃದಯಾಘಾತ ಮತ್ತು ಅಲ್ಪಕಾಲದ ಅನಾರೋಗ್ಯದಿಂದ ಶ್ರೀಧರ್ ಮತ್ತು ರಾಧಾಕೃಷ್ಣ ಎಂಬ ಉಪತಹಶೀಲ್ದಾರ್ ಗಳು ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ನಾಗದೋಷ ಪೂಜೆ