Saturday, November 23, 2024
ಹೆಚ್ಚಿನ ಸುದ್ದಿ

ಫ್ರಿಜ್ ನಲ್ಲಿಟ್ಟ ಆಹಾರ ತಿನ್ನುವ ಮುನ್ನ ಈ ಸುದ್ದಿ ಓದಲೇಬೇಕು-ಕಹಳೆ ನ್ಯೂಸ್

ಬೀಜಿಂಗ್: ನಾವು ಯಾವುದೇ ಆಹಾರ ಹೆಚ್ಚಾಗಿದ್ದರು ಅದನ್ನು ಫ್ರಿಜ್ ನಲ್ಲಿಟ್ಟು ಮರುದಿನ ಸೇವಿಸುತ್ತೇವೆ. ಅದಕ್ಕಾಗಿ ಫ್ರಿಜ್ ನ್ನು ಒಂದು ವರದಾನ ಎಂದೇ ಹೇಳುತ್ತೇವೆ. ಆದರೆ ಕೆಲವೊಂದು ಆಹಾರಗಳನ್ನು ಹೆಚ್ಚು ದಿನಗಳ ಕಾಲ ಫ್ರಿಜ್ ನಲ್ಲಿಟ್ಟು ಸೇವಿಸಿದರೆ ಜೀವಕ್ಕೆ ಮಾರಕವಾಗಬಹುದು ಎನ್ನುವುದು ನಿಮಗೆ ಗೊತ್ತೇ?

ಹೌದು ಫ್ರೀಜರ್‌ನಲ್ಲಿಟ್ಟಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ ಒಂಬತ್ತು ಮಂದಿ ದಾರುಣ ಸಾವನ್ನಪ್ಪಿದ್ದು ತಮಗೆ ಬೇಡ ಎಂದು ಹೇಳಿ ಮೂವರು ಮಕ್ಕಳು ಅದೃಷ್ಟವಶಾತ್ ಬದುಕುಳಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೀಜಿಂಗ್ ನ ಜಿಕ್ಸಿ ನಗರದಲ್ಲಿ ಈ ಘಟನೆ ನಡೆದಿದ್ದು ಕಳೆದ ಒಂದು ವರ್ಷದಿಂದ ಫ್ರೀಜರ್‌ನಲ್ಲಿ ಇಟ್ಟಿದ್ದ ನೂಡಲ್ಸ್ ಸೂಪ್ ಅನ್ನು ಸೇವಿಸಿದ್ದಾರೆ. ಫುಡ್ ಪಾಯ್ಸನ್ ಆಗಿ ಇಬ್ಬರು ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.
ಒಂದು ವರ್ಷದಿಂದ ಶೇಖರಿಸಿದ್ದರಿಂದ ಸೂಪ್ ಬಾಂಗ್ ಕ್ರೆಕ್ ಆಯಸಿಡ್ ಪಾಯ್ಸನಿಂಗ್ ಆಗಿದೆ. ಇದನ್ನು ತಿಳಿಯದ ಕುಟುಂಬ ಸೂಪ್ ಸೇವಿಸಿದ್ದಾರೆ. ಹೀಗಾಗಿ ಅವರ ಸಾವಿಗೆ ಕಾರಣವಾಗಿದೆ ಎಂದು ಹೀಲೋಂಗ್ ಜಾಂಗ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಯಂಡ್ ಪ್ರಿವೆನ್ಷನ್ ನ ಆಹಾರ ಸುರಕ್ಷತೆ ನಿರ್ದೇಶಕ ಗಾವೋ ಫೀ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು