Sunday, November 24, 2024
ಹೆಚ್ಚಿನ ಸುದ್ದಿ

ಅಯೋಧ್ಯೆಯಲ್ಲಿ ಬೆಳಗಲಿದೆ ಐದು ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳು: ಹೊಸ ವಿಶ್ವ ದಾಖಲೆಗೆ ಸಜ್ಜು-ಕಹಳೆ ನ್ಯೂಸ್

ಅಯೋಧ್ಯೆ : ಈ ವರ್ಷ ದೀಪೋತ್ಸವದ ಮುನ್ನಾ ದಿನದಂದು ಅಯೋಧ್ಯೆಯಲ್ಲಿ ಸುಮಾರು ಐದು ಲಕ್ಷದ ಐವತ್ತು ಸಾವಿರ ಮಣ್ಣಿನ ದೀಪಗಳು ಬೆಳಗಲಿವೆ.ಆ ಮೂಲಕ್ ಹೊಸ ವಿಶ್ವ ದಾಖಲೆ ಸೃಷ್ಟಿಸಲು ಅಯೋಧ್ಯೆ ಸಜ್ಜಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋವಿಡ್ -19 ನಿಯಮಗಳು ಜಾರಿಯಲ್ಲಿರುವುದರಿದ ಈ ವರ್ಷದ ದೀಪೋತ್ಸವ ಆಚರಣೆಯಿಂದ ಸಾರ್ವಜನಿಕರನ್ನು ದೂರವಿರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, ವರ್ಚ್ಯುವಲ್ ಕಾರ್ಯಲಕ್ರಮದ ಮೂಲಕ ಜನರು ಭಾಗವಹಿಸಲು ಅವಕಾಶ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವರ್ಷ ಸ್ಥಳೀಯ ನಿವಾಸಿಗಳು ಮತ್ತು ಸ್ವಯಂ ಸೇವಕರು, ಭಕ್ತರು ಒಗ್ಗೂಡಿ 1.50 ಲಕ್ಷ ಮಣ್ಣಿನ ದೀಪ ಬೆಳಗಲು ಸಿದ್ಧತೆ ನಡೆಸಿದ್ದಾರೆ.ಕಳೆದ ವರ್ಷ ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕವ ವಿಶ್ವ ದಾಖಲೆ ಮಾಡಲಾಗಿತ್ತು. ಈ ವರ್ಷ ಕೂಡ ಅಯೋಧ್ಯೆಯಲ್ಲಿ 5.50 ಲಕ್ಷ ದೀಪಗಳನ್ನು ಬೆಳಗಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ, ನಾವು ಕೋವಿಡ್ ಪ್ರೋಟೋಕಾಲ್​ಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತೇವೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಮಾಸ್ಕ್​ ಕಡ್ಡಾಯಗೊಳಿಸಿದ್ದೇವೆ. ಸರಯು ದಡಗಳಲ್ಲದೆ, ದೇವಾಲಯಗಳು ಮತ್ತು ಸ್ಮಾರಕಗಳು ಸಹ ಪ್ರಕಾಶಿಸಲ್ಪಡುತ್ತವೆ. ದೀಪಗಳ ಸಂಖ್ಯೆ 5.50 ಲಕ್ಷಕ್ಕಿಂತ ಹೆಚ್ಚಾಗಬಹುದು. ಈ ವರ್ಷ ಹೊಸ ದಾಖಲೆ ಮಾಡುತ್ತೇವೆ ‘ಎಂದು ಹೇಳಿದ್ದಾರೆ.