Monday, January 20, 2025
ಸುದ್ದಿ

ಈರುಳ್ಳಿ ದರ ಕೆಜಿಗೆ 100 ರೂ, ರೀಟೇಲ್ ದರ ತಗ್ಗಿಸಲು ಸರ್ಕಾರ ಯತ್ನ-ಕಹಳೆ ನ್ಯೂಸ್

ದೇಶದ ವಿವಿಧ ಮಾರುಕಟ್ಟೆಗಳಲ್ಲಿಈರುಳ್ಳಿ ರೀಟೇಲ್ ದರ ಕೆಜಿಗೆ 75ರಿಂದ 100 ರೂ. ದಾಟಿದೆ. ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿರ್ಬಂಧಿಸಿ, ಆಮದು ಹೆಚ್ಚಿದ್ದರಿಂದ ಚಿಲ್ಲರೆ ಹಾಗೂ ಹೋಲ್‌ಸೇಲ್ ಮಾರಾಟಗಾರರು ಈರುಳ್ಳಿ ಸಂಗ್ರಹ ಮಾಡುವುದರ ಮೇಲೆ ಮಿತಿ ಹೇರಿದೆ. ಆದರೆ ಈಗ ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಈರುಳ್ಳಿ ದಾಸ್ತಾನು ಮೇಲೆ ಸರ್ಕಾರ ಮಿತಿ ವಿಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಗತ್ಯವಸ್ತುಗಳ ಕಾಯ್ದೆಗೆ ಒಳಪಡುವ ಪಟ್ಟಿಯಿಂದ ಈರುಳ್ಳಿಯನ್ನು ಇತ್ತೀಚೆಗೆ ಕೈ ಬಿಡಲಾಗಿತ್ತು. ಚಿಲ್ಲರೆ ಮಾರಾಟಗಾರರು 20 ಕ್ವಿಂಟಲ್ ಹಾಗೂ ಸಗಟು ಮಾರಾಟಗಾರರು 250 ಕ್ವಿಂಟಲ್ ಈರುಳ್ಳಿ ಸಂಗ್ರಹ ಮಿತಿ ನಿಗದಿಯಾಗಿದೆ. ಆದರೆ, ಈರುಳ್ಳಿ ದರ ಹೆಚ್ಚಳದಂತೆ ಪೂರೈಕೆಯಲ್ಲಿ ಉಂಟಾದ ವ್ಯತ್ಯಾಸದಿಂದ ಕೃತಕ ಅಭಾವ ಉಂಟಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈರುಳ್ಳಿ ದಾಸ್ತಾನು ಮೇಲೆ ನಿಯಂತ್ರಣಕ್ಕೆ ಮುಂದಾಗಿದೆ.
ಗ್ರಾಹಕ ವ್ಯವಹಾರ ಸಚಿವಾಲಯದ ಮಾಹಿತಿಯಂತೆ, ಮುಂಬೈನಲ್ಲಿ ರೀಟೇಲ್ ಈರುಳ್ಳಿ ದರ 86/ಕೆ.ಜಿ, ಚೆನ್ನೈಯಲ್ಲಿ 83/ಕೆ.ಜಿ, ಕೋಲ್ಕತಾ 70/ಕೆ.ಜಿ ಹಾಗೂ ದೆಹಲಿಯಲಿ 55/ಕೆ.ಜಿ ರು ನಷ್ಟಿದೆ. ಕಾದಿಟ್ಟ ದಾಸ್ತಾನಿಂದ ಸುಮಾರು 8,000 ಟನ್ ಈರುಳ್ಳಿ ಪಡೆಯಲು ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಚಂದೀಗಢ, ಹರ್ಯಾಣ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳು ಮುಂದಾಗಿವೆ ಎಂದು ಸಚಿವಾಲಯದ ಕಾರ್ಯದರ್ಶಿ ಲೀನಾ ನಂದನ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಅತಿದೊಡ್ಡ ದಾಸ್ತಾನು ಕೇಂದ್ರದಿಂದ ಪ್ರತಿ ರಾಜ್ಯಕ್ಕೆ 25-26 ಪ್ರತಿ ಕೆಜಿಯಂತೆ ಪೂರೈಕೆ ಮಾಡಲಾಗುತ್ತಿದೆ. 2019-20 ರಾಬಿ ಬೆಳೆಯಲ್ಲಿ ಸುಮಾರು 1,00,000 ಟನ್ ದಾಸ್ತಾನು ಮಾಡಲಾಗಿದೆ. ಈ ಪೈಕಿ 30,000 ಕಾದಿಟ್ಟ ದಾಸ್ತಾನು ಇದೆ. ದೇಶದೆಲ್ಲೆಡೆ ಮಂಡಿಗಳಿಗೆ ಖಾರೀಫ್ ಬೆಳೆ ಬರಲು ಆರಂಭಿಸಿದ್ದು, ಇನ್ನು 37 ಲಕ್ಷ ಟನ್ ದಾಸ್ತಾನು ಗುರಿ ಇದೆ. ಹೀಗಾಗಿ, ಕ್ರಮೇಣ ದರ ತಗ್ಗುವ ನಿರೀಕ್ಷೆಯಿದೆ.