Monday, January 20, 2025
ಹೆಚ್ಚಿನ ಸುದ್ದಿ

ಆನ್‌ಲೈನ್ ತರಗತಿಯಲ್ಲಿ ಉತ್ತರಿಸಲು ವಿಫಲಳಾದ ಮಗಳಿಗೆ ಪೆನ್ಸಿಲ್‌ನಿಂದ ಚುಚ್ಚಿದ ತಾಯಿ; ತಾಯಿಯ ವಿರುದ್ಧ ಪ್ರಕರಣ ದಾಖಲು-ಕಹಳೆ ನ್ಯೂಸ್

ಮುಂಬೈ: ಆನ್‌ಲೈನ್ ತರಗತಿ ನಡುವೆ ಗಮನ ಕೇಂದ್ರೀಕರಿಸಲು ವಿಫಲಳಾದ ಮಗಳನ್ನು ಆಕೆಯ ತಾಯಿ ಪೆನ್ಸಿಲ್‌ನಿಂದ ಚುಚ್ಚಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ. ಆಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆನ್‌ಲೈನ್ ತರಗತಿ ವೇಳೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು 12 ವರ್ಷದ ವಿದ್ಯಾರ್ಥಿನಿ ವಿಫಲಳಾಗಿದ್ದಳು. ಇದರಿಂದ ಕೋಪಗೊಂಡ ಮಹಿಳೆ ಆಕೆಗೆ ಪೆನ್ಸಿಲ್‌ನಿಂದ ಚುಚ್ಚಿದ್ದಾಳೆ. ಸಾಂಟಾಕ್ರೂಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಬಾಲಕಿ ಆನ್‌ಲೈನ್ ತರಗತಿಗೆ ಹಾಜರಾಗಿದ್ದಾಗ ಈ ಘಟನೆ ನಡೆದಿದೆ. ತರಗತಿ ವೇಳೆ ಶಿಕ್ಷಕರು ಪ್ರಶ್ನೆಯೊಂದನ್ನು ಕೇಳಿದ್ದರು. ಆ ಪ್ರಶ್ನೆಗೆ ಬಾಲಕಿಗೆ ಉತ್ತರ ಗೊತ್ತಿರಲಿಲ್ಲ. ಅಷ್ಟಕ್ಕೇ ಕ್ರುದ್ಧಳಾದ ತಾಯಿ ಪೆನ್ಸಿಲ್ ತೆಗೆದುಕೊಂಡು ಹಿಂಭಾಗದಿಂದ ಆಕೆಗೆ ಇರಿದಿದ್ದಾಳೆ. ಬಳಿಕ ಹಲವು ಬಾರಿ ಥಳಿಸಿದ್ದಾರೆ. ಇದನ್ನು ಕಂಡು ಭಯಗೊಂಡ ಬಾಲಕಿಯ ತಂಗಿ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.

ಮಾಹಿತಿ ತಿಳಿದ ಎನ್‌ಜಿಒದ ಇಬ್ಬರು ಪ್ರತಿನಿಧಿಗಳು ಬಾಲಕಿಯ ಮನೆಗೆ ತೆರಳಿದ ಮಹಿಳೆಯಿಂದ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ತಾಯಿ ತನ್ನ ಮನೋಭಾವವನ್ನು ಬದಲಿಸಿಕೊಂಡಿರಲಿಲ್ಲ. ಕೊನೆಗೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಇನ್ನೂ ಬಂಧಿಸಿಲ್ಲ.