Saturday, November 23, 2024
ಹೆಚ್ಚಿನ ಸುದ್ದಿ

ಆನ್ಲೈನ್ ಶಿಕ್ಷಣದಲ್ಲೂ ಕ್ರಿಯಾತ್ಮಕ, ಸೃಜನಶೀಲ ಬೋಧನೆ ಸಾಧ್ಯ-ಕಹಳೆ ನ್ಯೂಸ್

ಆನ್ಲೈನ್ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು.ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್ಲೈನ್ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ದಿಶೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತುಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್ ಮಾಡಿ. 7618774529
ಆನ್ಲೈನ್ ಶಿಕ್ಷಣವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದೇವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಒಪ್ಪುತ್ತಿಲ್ಲ, ಒಂದು ವೇಳೆ ಶಾಲೆ ತೆರೆದರೂ ಸೋಂಕು ಹರಡುವಿಕೆಯ ವೇಗ ನೋಡಿದಾಗ ಮಕ್ಕಳ ಭವಿಷ್ಯದ ಬಗ್ಗೆ ಆತಂಕವಾಗುವುದು ಸಹಜ. ಈ ನಡುವೆ ಮಕ್ಕಳ ಶಾಲಾ ಚಟುವಟಿಕೆ ಸ್ಥಗಿತಗೊಳ್ಳಬಾರದು ಎಂಬ ಕಾರಣದಿಂದ ಶಿಕ್ಷಣವನ್ನು ಸರಿದೂಗಿಸಿಕೊಳ್ಳುವ ದಾರಿಯಾಗಿ ಆನ್ಲೈನ್ ಶಿಕ್ಷಣವನ್ನು ಉಪಕ್ರಮವಾಗಿಸಿಕೊಳ್ಳಲಾಗಿದೆ. ಹೆಚ್ಚೆಂದರೆ ಒಂದೆರಡು ತಿಂಗಳು ಮುಂದುವರಿಯಬೇಕಿದ್ದ ಆನ್ಲೈನ್ ಶಿಕ್ಷಣ ಐದಾರು ತಿಂಗಳುಗಳಿಂದ ನಡೆದುಕೊಂಡು ಬರುತ್ತಿದೆ. ಹಾಗಾದರೆ ಶಿಕ್ಷಣದ ನಿರಂತರತೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಆನ್ಲೈನ್ ಶಿಕ್ಷಣ
ತೊಡಕಾಗಬಲ್ಲದೇ? ಈ ಕುರಿತು ಶಿಕ್ಷಣ ತಜ್ಞ ಪ್ರೊ| ಎ. ಎಂ. ನರಹರಿ ವಿವರಿಸಿದ್ದಾರೆ.
ಹೆತ್ತವರು, ಶಿಕ್ಷಕರು ಏನು ಮಾಡಬಹುದು?
ಮಕ್ಕಳಿಗೆ ಬರೀ ಪಾಠ ಮಾತ್ರವಲ್ಲ, ಕೇಳುವಂತಹ ಪಾಠ ಬೇಕು. ಅದಕ್ಕಾಗಿ ಆಯಕ್ಟಿವಿಟಿ ಆಧಾರಿತ ಬೋಧನೆ, ಸೃಜನಶೀಲ ಬೋಧನೆ ಮತ್ತು ಪ್ರಾಯೋಗಿಕ ಬೋಧನೆ ಅಗತ್ಯ. ಲಭ್ಯ ತಾಂತ್ರಿಕತೆಯಡಿ ಈ ಮಾದರಿಯ ಶಿಕ್ಷಣಕ್ಕೆ ಕೆಲವು ಕಡೆ ಒತ್ತು ನೀಡುತ್ತಿದ್ದಾರೆ. ಪ್ರತಿ ಮಗುವಿಗೂ ಈ ಮಾದರಿಯ ಶಿಕ್ಷಣ ತಲುಪಲು ಸಾಧ್ಯವೇ ಎಂಬ ಬಗ್ಗೆ ಶಿಕ್ಷಕರು ಪ್ರಯತ್ನಿಸಬಹುದು.
ಮಕ್ಕಳಿಗೆ ಆನ್ಲೈನ್ನಲ್ಲೇ ಪಿಪಿಟಿ, ವರ್ಚುವಲ್ ಲ್ಯಾಬ್ಗಳನ್ನು ತೋರಿಸಿ ಅಲ್ಲಿಯ ಪ್ರಾಯೋಗಿಕ ಕಲಿಕೆಗಳ ಬಗ್ಗೆ ವಿವರಿಸಬಹುದು. ಆನ್ಲೈನ್ನಲ್ಲಿ ಕೇವಲ ಹೇಳುವುದಕ್ಕಿಂತ ಈ ರೀತಿಯ ಪ್ರಯೋಗಗಳು ಸ್ವಲ್ಪವಾದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು.
ಪುಟಾಣಿ ಮಕ್ಕಳಿಗೆ ಆನ್ಲೈನ್ ಹೊರತಾಗಿಯೂ ಶಿಕ್ಷಣದ ನಿರಂತರತೆ ಕಾಯ್ದುಕೊಳ್ಳಲು ಮನೆಯಲ್ಲೇ ಚಟುವಟಿಕೆಗಳನ್ನು ನೀಡುವುದು, ಚಿತ್ರ ಬಿಡಿಸಲು ಹೇಳುವುದು ಮೊದಲಾದವುಗಳನ್ನು ಪೋಷಕರು ಮಾಡುತ್ತಿರಬೇಕು. ಕೆಲವೆಡೆ ಈ ರೀತಿಯ ಚಟುವಟಿಕೆಗಳು ಮಕ್ಕಳನ್ನು ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡಿದೆ.
ನಿರಂತರತೆಗೆ ತೊಡಕು
ಮಕ್ಕಳ ಶೈಕ್ಷಣಿಕ ಚಟುವಟಿಕೆ ಮುಂದುವರಿಸಲು ಬೇರೆ ಯಾವ ಮಾರ್ಗವೂ ಇಲ್ಲದಿದ್ದಾಗ ಆನ್ಲೈನ್ ಶಿಕ್ಷಣ ಅನಿವಾರ್ಯವಾಯಿತು. ಇಲ್ಲಿ ಯಾರನ್ನೂ ದೂರುವ ಹಾಗಿಲ್ಲ, ಏಕೆಂದರೆ ಇದು ಸಂದರ್ಭದ ಅನಿವಾರ್ಯತೆ. ಆದರೆ ಖಂಡಿತವಾಗಿಯೂ ಆನ್ಲೈನ್ ಶಿಕ್ಷಣದಿಂದ ಶಿಕ್ಷಣದ ನಿರಂತರತೆ ಹೋಗುತ್ತದೆ. ಏಕೆಂದರೆ ಒಂದು ಶಿಕ್ಷಣ ವ್ಯವಸ್ಥೆಯಿಂದ ಇನ್ನೊಂದಕ್ಕೆ ಅದರಲ್ಲೂ ತಾಂತ್ರಿಕವಾಗಿರುವ ಶಿಕ್ಷಣಕ್ಕೆ ಒಗ್ಗಿಕೊಳ್ಳುವ ಮುನ್ನ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಇಲ್ಲಿ ತತ್ಕ್ಷಣದ ಅಗತ್ಯಕ್ಕಾಗಿ ಅಂತಹ ತಯಾರಿ ಸಾಧ್ಯವಾಗಿಲ್ಲ. ತಾಂತ್ರಿಕತೆ, ಉಪಕರಣಗಳೂ ಸರಿಯಾಗಿಲ್ಲ ಎಂದಾಗ ಶಿಕ್ಷಣದ ಮೇಲೆ ತೊಡಕು ಸಾಮಾನ್ಯ.
ಗ್ರಾಮೀಣ ಭಾಗದಲ್ಲಿ ಇವತ್ತಿಗೂ ನೆಟ್ವರ್ಕ್
ಇಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಯಾಂತ್ರಿಕವಾಗಿದೆ. ಆದರೆ ಗ್ರಾಮ್ಯ ಮಕ್ಕಳಿಗೆ ಇನ್ನೂ ಈ ರೀತಿಯ ಶಿಕ್ಷಣ ತಲುಪಿಲ್ಲ. ಹೀಗಾಗಿ ಅವರು ಶಿಕ್ಷಣದ ನಿರಂತರ ಪ್ರಕ್ರಿಯೆಯಿಂದ ಹಿಂದುಳಿಯುವಂತಾಗಿದೆ.
ಆನ್ಲೈನ್ ಶಿಕ್ಷಣ ಉಪಯೋಗವಾಗುವುದು ಅಡ್ವಾನ್ಸ್ಡ್ ಹಂತದಲ್ಲಿ ಮಾತ್ರ. ಅಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿರುವುದರಿಂದ ಅವರನ್ನು ತಲುಪುವುದಕ್ಕೆ ಅಷ್ಟೇನು ಪ್ರಯಾಸ ಇಲ್ಲ. ಆದರೆ ಪ್ರಾಥಮಿಕದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗೆ ಸಮೂಹ ಶಿಕ್ಷಣ. ಇಲ್ಲಿ ಮಕ್ಕಳ ಶಿಕ್ಷಣ ಬದುಕಿಗೆ ಆನ್ಲೈನ್ ಅನಿವಾರ್ಯದ ಬೆಸುಗೆಯಾಗಿಬಿಟ್ಟಿದೆಯಷ್ಟೇ.
ಪಾಠಕ್ಕೆ ಭಾವ ತುಂಬಲಾಗುವುದಿಲ್ಲ
ಆನ್ಲೈನ್ ಶಿಕ್ಷಣ ಅನಿವಾರ್ಯವಾಗಿ ಒಪ್ಪಿಕೊಂಡದ್ದಾಗಿದೆ. ಇದರಿಂದ ಶಿಕ್ಷಣದ ನಿರಂತರತೆಗೆ ಖಂಡಿತ ತೊಡಕಾಗುತ್ತದೆ. ಇಲ್ಲಿ ಪಾಠ ಕೇವಲ ಯಾಂತ್ರಿಕವಷ್ಟೇ, ಭಾವ ತುಂಬಲಾಗುವುದಿಲ್ಲ. ಮಕ್ಕಳು-ಶಿಕ್ಷಕರು ಎದುರೆದುರು ಇದ್ದು ಕಲಿತಾಗ ಮಾತ್ರ ಆ ಶಿಕ್ಷಣ ಅರ್ಥಪೂರ್ಣವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು