ನವದೆಹಲಿ: ಇಷ್ಟು ದಿನಗಳ ಕಾಲ ಅನ್ಯಜೀವಿ ಗ್ರಹಗಳು ಇದ್ದವಾ? ಇಲ್ಲವಾ? ಎನ್ನುವ ಚರ್ಚೆ ನಡೆಯುತ್ತಿತ್ತು.ಅದ್ರೀಗ ಅವುಗಳ ಕುರಿತು ಹೊಸದೊಂದು ಸತ್ಯ ಹೊರ ಬಿದ್ದಿದ್ದು, ನಾವು ಅನ್ಯಜೀವಿ ಗ್ರಹಗಳನ್ನ ನೋಡದಿದ್ರು ಅವುಗಳು ನಮ್ಮನ್ನ ನೋಡುತ್ತಿವೆ ಎಂದು ಅಧ್ಯಯನವೊಂದು ತಿಳಿಸಿದೆ.
ಕಾರ್ಲ್ ಸಗನ್ ಇನ್ಸ್ಟಿಟ್ಯೂಟ್ನ ಯುನಿವರ್ಸಿಟಿಗಳ ಡೈರೆಕ್ಟರ್ ಹಾಗೂ ಕಾರ್ನೆಲ್ನ ಪ್ರೊಫೆಸರ್ ಆಫ್ ಅಸ್ಟ್ರಾನಮಿ ಆಗಿರುವ ಲಿಸಾ ಕಾಲ್ಟೆನೆಗರ್ ನೇತೃತ್ವದ ತಂಡ ಈ ಅಧ್ಯಯನವನ್ನು ಮಾಡಿದೆ. ಅಂದ್ಹಾಗೆ, ಇವ್ರು 1004 ನಕ್ಷತ್ರಗಳು ಇರುವಿಕೆಯನ್ನು ಗುರುತಿಸಿದ್ದು, ಅವುಗಳಲ್ಲಿ ಭೂಮಿಯಂಥ ಜೀವಿಸಲು ಯೋಗ್ಯ ಗ್ರಹಗಳಿರುವ ಸಾಧ್ಯತೆ ಇದೆ ಎಂದಿದ್ದಾರೆ. ಈ ನಕ್ಷತ್ರಗಳೆಲ್ಲವೂ ಭೂಮಿಯಿಂದ 326 ಜ್ಯೋತಿವರ್ಷಗಳ ದೂರದಲ್ಲಿವೆ. ಇನ್ನು ಆ ಪೈಕಿ ಅತ್ಯಂತ ಹತ್ತಿರದಲ್ಲಿರುವ ನಕ್ಷತ್ರವು ಸೂರ್ಯನಿಂದ 28 ಜ್ಯೋತಿವರ್ಷಗಳ ದೂರದಲ್ಲಿದೆ. ಅಲ್ಲದೆ ಅವುಗಳಲ್ಲಿ ಅತ್ಯಂತ ಪ್ರಖರವಾಗಿರುವ ನಕ್ಷತ್ರಗಳಿದ್ದು, ರಾತ್ರಿ ಹೊತ್ತಲ್ಲಿ ಅವುಗಳನ್ನ ಬರಿಗಣ್ಣಿಗೂ ಕಾಣಿಸುತ್ವೆ ಎಂದಿದ್ದಾರೆ. ನಭೋಮಂಡಲದಲ್ಲಿ 100-300 ಶತಲಕ್ಷ ತಾರೆಗಳಿದ್ದು, ಅವುಗಳಲ್ಲಿ ಒಂದು ಲಕ್ಷದಷ್ಟು ತಾರೆಗಳ ಅಧ್ಯಯನವನ್ನ ಆಸ್ಟ್ರೇಲಿಯದ ಖಗೋಳಶಾಸ್ತ್ರಜ್ಞರು ನಡೆಸಿದ್ದಾರೆ. ಆ ಪೈಕಿ ಅನ್ಯಗ್ರಹ ಜೀವಿಗಳ ಅಸ್ತಿತ್ವದಲ್ಲಿರುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.