‘ಆಧಾರ್’ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಆಗಿದೆಯಾ..? ಇಲ್ಲಿದೆ ಪರೀಕ್ಷಿಸುವ ಸುಲಭ ವಿಧಾನ-ಕಹಳೆ ನ್ಯೂಸ್
ಕೇಂದ್ರ ಸರ್ಕಾರದ ಸೂಚನೆಯನ್ವಯ ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲದೇ ಹೋದರೆ ದಂಡ ವಿಧಿಸುತ್ತೇವೆ ಎಂದು ಹೇಳಲಾಗಿತ್ತು. ಕೊರೊನಾದಿಂದಾಗಿ ಈ ಪ್ರಕ್ರಿಯೆಯ ಗಡುವನ್ನು ಈ ಹಿಂದೆ ಇದ್ದ 2020 ಜೂನ್ 30 ರ ಬದಲಾಗಿ 2021 ರ ಮಾರ್ಚ್ 31 ರ ವರೆಗೆ ವಿಸ್ತರಿಸಲಾಗಿದೆ.
ಅನೇಕ ಜನ ಪಾನ್ ಕಾರ್ಡ್, ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಕೂಡ ಮಾಡಿದ್ದರೂ ಅದು ಆಗಿದೆಯೋ ಇಲ್ಲವೋ ಎಂಬ ಗೊಂದಲದಲ್ಲಿರುತ್ತಾರೆ. ಇದೀಗ ನಿಮ್ಮ ಪಾನ್ ಕಾರ್ಡ್ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿದೆಯಾ ಇಲ್ವಾ ಎಂಬುದನ್ನು ತಿಳಿಯೋದಿಕ್ಕೆ ಸರಳ ವಿಧಾನ ಇಲ್ಲಿದೆ.
ನೀವು ಈ ಪ್ರಕ್ರಿಯೆ ಮುಗಿಸಿದ್ದರೆ, ಅದರ ಸ್ಥಿತಿಗತಿ ತಿಳಿಯಲು ಆನ್‌ಲೈನ್ ಮೊರೆ ಹೋಗಬಹುದು. ಮೊದಲು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಆಧಾರ್ ಲಿಂಕ್ ಆಪ್ಷನ್ ಆಯ್ಕೆ ಮಾಡಿಕೊಳ್ಳಿ. ನಂತರ ಲಿಂಕ್ ಪ್ರಕ್ರಿಯೆ ಮುಗಿದಿದ್ದರೆ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. ಆಗ ಆ ಕಾರ್ಡ್ ಲಿಂಕ್ ಆಗಿದೆಯೋ ಇಲ್ವೋ ಎಂಬ ಮಾಹಿತಿ ಗೊತ್ತಾಗುತ್ತದೆ.
ಮತ್ತೊಂದು ಆಯ್ಕೆ ಇದೆ. ನೀವು ಇ ಫಿಲ್ಲಿಂಗ್ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಪಾನ್ ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿದ ನಂತರ ಲಿಂಕ್ ಆಗಿದ್ದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.