Sunday, January 19, 2025
ಮೈಸೂರು

ಇಂದು ದಸರಾ ಜಂಬೂಸವಾರಿ; ಮೈಸೂರು ಅರಮನೆ ಸುತ್ತ ನಿಷೇಧಾಜ್ಞೆ ಜಾರಿ-ಕಹಳೆ ನ್ಯೂಸ್

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಕೊರೋನಾದಿಂದಾಗಿ ಕೇವಲ 300 ಗಣ್ಯರಿಗೆ ಮಾತ್ರ ಜಂಬೂ ಸವಾರಿ ವೀಕ್ಷಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಜನರು ಸೇರುವ ಸಾಧ್ಯತೆ ಇರುವುದರಿಂದ ಮೈಸೂರು ಅರಮನೆಯ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರು ಅರಮನೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ನಾಲ್ಕು ರಸ್ತೆಗಳು ಬಂದ್ ಆಗಿವೆ. ಮೈಸೂರು ಅರಮನೆಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ನಿರ್ಬಂಧಿಸಲಾಗಿದೆ. ಅರಮನೆಯ ಸುತ್ತ ಸಾರ್ವಜನಿಕರು ಓಡಾಡುವಂತಿಲ್ಲ. ಮನೆಯಲ್ಲೇ ಕುಳಿತು ವರ್ಚುವಲ್ ದಸರಾ ವೀಕ್ಷಣೆಗೆ ಮನವಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರಿನ ಕೆಆರ್​ ಸರ್ಕಲ್, ಚಾಮರಾಜ ವೃತ್ತ, ಜಯಮಾರ್ತಾಂಡ ವೃತ್ತ ರಸ್ತೆ ಬಂದ್ ಆಗಿದೆ. ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಅರಮನೆಗೆ ಆಗಮಿಸಿದೆ. ದಾರಿ ಮಧ್ಯದಲ್ಲಿ ಸಾರ್ವಜನಿಕರಿಂದ ದೇವಿಗೆ ಪೂಜೆ ಸಲ್ಲಿಸಲಾಯಿತು. ಪೊಲೀಸ್ ಭದ್ರತೆಯಲ್ಲೇ ಅರಮನೆಯ ಆವರಣದ ಒಳಗೆ ಉತ್ಸವ ಮೂರ್ತಿ ವಾಹನ ಆಗಮಿಸಿತು. ಇಂದು ಮೈಸೂರು ಅರಮನೆ ಆವರಣದ ಸುತ್ತಮುತ್ತ ಸೆಕ್ಷನ್ 144 ಜಾರಿಗೊಳಿಸಲಾಗಿರುವುದರಿಂದ ಅರಮನೆ ಆವರಣದ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣವಾಗಿ ಸ್ಥಬ್ಧವಾಗಿವೆ. ಜಂಬು ಜವಾರಿ ದಿನವಾದ ಇಂದು ಕೂಡ ಅರಮನೆಯ ರಸ್ತೆಗಳೆಲ್ಲಾ ಖಾಲಿಯಾಗಿವೆ. ದೂರದಿಂದಲೇ ಅರಮನೆ ನೋಡಿ, ಸೆಲ್ಫಿ ತೆಗೆದುಕೊಂಡು ಜನರು ಹೋಗುತ್ತಿದ್ದಾರೆ. ಇಂದು ಮೈಸೂರು ರಾಜಮನೆತನದಿಂದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗಿದೆ. ಬನ್ನಿಪೂಜೆಗೆ ಭುವನೇಶ್ವರಿ ದೇವಾಲಯ ಸಿದ್ಧಗೊಂಡಿದೆ. ಇಂದು ಬೆಳಗ್ಗೆ 9.30ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು, ಆನೆ ಅರಮನೆಯ ಬಾಗಿಲಿಗೆ ಆಗಮನವಾಗಿತ್ತು. ಈ ಬಾರಿ ವಜ್ರಮುಷ್ಠಿ ಕಾಳಗ ರದ್ದುಪಡಿಸಲಾಗಿದೆ. ಯದುವೀರ್ ಒಡೆಯರ್ ಬನ್ನಿಮಂಟಪಕ್ಕೆ ಪೂಜೆ ಸಲ್ಲಿಸಿದ್ದಾರೆ.

ನವರಾತ್ರಿಯ ಕೊನೆಯ ದಿನವಾದ ಇಂದು ಮೈಸೂರು ಅರಮನೆಯಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ವಿಜಯದಶಮಿಯಂದು ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ವೀಕ್ಷಿಸಲು ಪ್ರತಿವರ್ಷ ದೇಶ-ವಿದೇಶಗಳಿಂದ ಸಾವಿರಾರು ಜನರು ಬರುತ್ತಿದ್ದರು. ಆದರೆ, ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಕೇವಲ 300 ಜನ ಗಣ್ಯರಿಗೆ, ಆಹ್ವಾನಿತರಿಗೆ ಮಾತ್ರ ಜಂಬೂ ಸವಾರಿ ವೀಕ್ಷಿಸಲು ಅವಕಾಶ ನೀಡಲಾಗಿದೆ. ಅಂಬಾ ವಿಲಾಸ ಅರಮನೆಯ ಮುಂಭಾಗದಲ್ಲಿಯೇ ಇಂದು ಜಂಬೂಸವಾರಿ ನಡೆಯಲಿದೆ. ಪ್ರತಿವರ್ಷ ಮೈಸೂರಿನ ರಸ್ತೆಗಳಲ್ಲಿ ಸಾಗುತ್ತಿದ್ದ ಜಂಬೂಸವಾರಿ ಈ ಬಾರಿ ಅರಮನೆ ಆವರಣಕ್ಕೆ ಸೀಮಿತವಾಗಿದೆ. ಇಂದು ಮಧ್ಯಾಹ್ನ 3.40ರಿಂದ ಸಂಜೆ 4.15ರೊಳಗೆ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ.