ಪುತ್ತೂರಿನ ಪ್ರತಿಷ್ಠಿತ ಕ್ಲಬ್ ಒಂದರಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪುತ್ತೂರು ನಗರ ಠಾಣೆ ಪೊಲೀಸರು ದಾಳಿ ನಡೆಸಿ, 15 ಜನರನ್ನು ಬಂಧಿಸಿದ್ದಾರೆ.
ಪುತ್ತೂರಿನ ಮಾರ್ಕೆಟ್ ರಸ್ತೆಯ ಮೀನು ಮಾರುಕಟ್ಟೆ ಸಮೀಪದ ಯೂನಿಯನ್ ಕ್ಲಬ್, ನೊಂದಾಯಿತ ಕ್ಲಬ್ ಆಗಿದ್ದರೂ, ಹಣವನ್ನು ಪಣವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ 15 ಮಂದಿ ಇಸ್ಪಿಟ್ ಆಡುತ್ತಿದ್ದರು. ಈ ವೇಳೆ ಪುತ್ತೂರು ಎ.ಎಸ್.ಐಯವರ ನಿರ್ದೇಶನದಂತೆ, ಪುತ್ತೂರು ನಗರ ಠಾಣೆ ಇನ್ಸ್‍ಪೆಕ್ಟರ್ ಗೋಪಾಲ ನಾಯ್ಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ, ಸುಮಾರು 1.5 ಲಕ್ಷ ರೂಪಾಯಿ ಹಣ, ಕೃತ್ಯದ ಸ್ಥಳದಿಂದ 2 ಟೇಬಲ್, 14 ಚೇಯರ್ ವಶಪಡಿಸಿಕೊಂಡಿದ್ದಾರೆ.