Sunday, November 24, 2024
ಹೆಚ್ಚಿನ ಸುದ್ದಿ

ಸದ್ಯದಲ್ಲೇ ದೇಶದಲ್ಲಿ ‘ಡೇಟಾ’ಗೆ ಕನಿಷ್ಟ ಶುಲ್ಕ ನಿಗದಿ-ಕಹಳೆ ನ್ಯೂಸ್

ನವದೆಹಲಿ : ದೇಶಾದ್ಯಂತ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂತಹ ಏರಿಕೆಗೆ ಅನುಗುಣವಾಗಿ ಡೇಟಾ ದರದಲ್ಲಿ ಕಡಿಮೆಗೊಳಿಸಬೇಕಿದ್ದಂತ ಒಂದೊಂದು ಮೊಬೈಲ್ ಸೇವಾ ಕಂಪನಿಗಳು ದುಪ್ಪಟ್ಟು ಶುಲ್ಕ ವಿಧಿಸುತ್ತಿವೆ ಎನ್ನಲಾಗಿದೆ. ಹೀಗಾಗಿ ದೇಶದಲ್ಲಿ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ದೂರಸಂಪರ್ಕ ಕಂಪನಿಗಳು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು(ಟ್ರಾಯ್) ಒತ್ತಾಯಿಸಿವೆ. ಹೀಗಾಗಿ ಸದ್ಯದಲ್ಲಿಯೇ ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಇಂಟರ್ ನೇಟ್ ಬಳಕೆದಾರರಿಗೆ ಗುಡ್ ನ್ಯೂಸ್ ಕೂಡ ಸಿಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ರಾಯ್ ನ ಹೊಸ ಅಧ್ಯಕ್ಷ ಪಿ.ಡಿ.ವಘೇಲಾ ಜೊತೆ ನಡೆಸಿದಂತ ಸಭೆಯಲ್ಲಿ ದೂರ ಸಂಪರ್ಕ ಕಂಪನಿಗಳು ಈ ಒತ್ತಾಯ ಮಾಡಿದ್ದಾವೆ ಎಂಬುದಾಗಿ ಮೂಲಕಗಳಿಂದ ತಿಳಿದು ಬಂದಿದೆ. ಡೇಟಾ ಸೇವೆಗಳ ಕನಿಷ್ಠ ಶುಲ್ಕವನ್ನು ಟ್ರಾಯ್ಡ್ ಮೂಲಕವೇ ನಿಗದಿ ಆಗಬೇಕು ಎಂಬುದು ದೂರ ಸಂಪರ್ಕ ಉದ್ಯಮದ ಆಗ್ರಹ. ಈ ವಿಚಾರವಾಗಿ ಸಮಾಲೋಚನೆಯ ಪ್ರಕ್ರಿಯೆಯನ್ನು ಬೇಗ ನಡೆಸಬೇಕು. ನಿಯಮಗಳನ್ನು ಜಾರಿಗೆ ತರಬೇಕು ಎಂದು ಟ್ರಾಯ್ ಅನ್ನು ಮನವಿ ಮಾಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಹಾಗೇ ಒಂದು ತಿಂಗಳಿಗೆ 160 ರೂಪಾಯಿ ಪಾವತಿಸಿ, ದೇಶದಲ್ಲಿ 16 ಜಿಬಿ ಡೇಟಾವನ್ನು ನೀಡಲಾಗುತ್ತಿರುವುದು ದೇಶದಲ್ಲಿ ದುರಂತವೇ ಸರಿ ಎಂಬುದಾಗಿ ಭಾರತಿ ಏರ್ ಟೆಲ್ ಕಂಪನಿಯ ಅಧ್ಯಕ್ಷ ಸುನಿಲ್ ಮಿತ್ತಲ್ ಕೆಲವು ತಿಂಗಳ ಹಿಂದಷ್ಟೇ ಹೇಳಿದ್ದರು. ಇದರ ಬೆನ್ನಲ್ಲೇ ವಫೇಲಾ ಜೊತೆಗೆ ಈ ಮಾತುಕತೆ ನಡೆದಿರುವುದರಿಂದ, ಟ್ರಾಯ್ ಅನ್ನು ಕಂಪನಿಗಳು ಒತ್ತಾಯಿಸಿರುವುದರಿಂದ ಸದ್ಯದಲ್ಲಿಯೇ ದೇಶದಲ್ಲಿ ಡೇಟಾಗೆ ಕನಿಷ್ಠ ಶುಲ್ಕ ನಿಗದಿಯಾಗಲಿದೆ. ಈ ಮೂಲಕ ಇಂಟರ್ ನೆಟ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಗಲಿದೆ.