Monday, January 20, 2025
ಪುತ್ತೂರು

ಆಕಾಶ್ ಜೊತೆ ಸಹಯೋಗದೊಂದಿಗೆ ಅಂಬಿಕಾದಲ್ಲಿ ನೀಟ್ ರಿಪೀಟರ್ಸ್ ತರಗತಿ-ಕಹಳೆ ನ್ಯೂಸ್

ಈ ವರ್ಷದ ನೀಟ್ ಪರೀಕ್ಷೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಯನ್ನು ಮಾಡಿರುತ್ತಾರೆ. ಪ್ರತಿ ವರ್ಷವೂ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅತ್ಯುನ್ನತ ಸಾಧನೆಯನ್ನು ಮಾಡಿರುವಂತಹದು ಹೆಮ್ಮೆಯ ಸಂಗತಿ. ಈ ವಿಶೇಷ ಸಾಧನೆಯನ್ನು ಪರಿಗಣಿಸಿ ಅಂಬಿಕಾ ವಿದ್ಯಾಲಯದಲ್ಲಿ ಈ ವರ್ಷದಿಂದ ನೀಟ್ ರಿಪೀಟರ್ಸ್ ತರಗತಿಗಳನ್ನು ನಡೆಸುವುದೆಂದು ತೀರ್ಮಾನಿಸಲಾಗಿದೆ. ಹಲವು ವಿದ್ಯಾರ್ಥಿಗಳಿಗೆ ನೀಟ್
ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳನ್ನು ಪಡೆಯುವುದು ಕಷ್ಟಸಾಧ್ಯವಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಈ ರಿಪೀಟರ್ಸ್ ತರಗತಿಗಳಿಂದಾಗಿ ವಿಶೇಷವಾದ ಉಪಯೋಗ ದೊರಕಲಿದೆ. ಈ ತರಗತಿಗಳು ಭಾರತದ ನಂಬರ್ 1 ಕೋಚಿಂಗ್ ಸಂಸ್ಥೆ ‘ಆಕಾಶ್’ ಜೊತೆ
ಸಹಯೋಗದೊಂದಿಗೆ ನಡೆಯಲಿದೆ. ಈ ತರಗತಿಗಳು ನವೆಂಬರ್ 1ರಿಂದ ಪ್ರಾರಂಭವಾಗುವುದೆಂದು ಸಂಸ್ಥೆಯು ತಿಳಿಸಿದೆ. ಇದಕ್ಕೆ ಸೇರಲು ಇಚ್ಚಿಸುವ ವಿದ್ಯಾರ್ಥಿಗಳು ನವೆಂಬರ್ 1ರ ಮೊದಲು ತಮ್ಮ ಹೆಸರನ್ನು ನೊಂದಾಯಿಸಬೇಕೆಂದು ಸಂಸ್ಥೆಯು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 9448835488, 08251-298688, 235688 ನ್ನು ಸಂಪರ್ಕಿಸಬಹುದು.

ಜಾಹೀರಾತು

ಜಾಹೀರಾತು
ಜಾಹೀರಾತು