Monday, January 20, 2025
ಸುದ್ದಿ

ಸಾಹಿತ್ಯ ಕ್ಷೇತ್ರದಲ್ಲಿ ವ್ಯವಹಾರಗಳು ನಡೆಯದಿರಲಿ- ಮುರಳಿಕೃಷ್ಣ ಕೆ.ಎನ್-ಕಹಳೆ ನ್ಯೂಸ್

ಪುತ್ತೂರು: ಅ.22; ಸಾಹಿತ್ಯಗಳು ಮನಸ್ಸಿನ ಭಾವನೆಗಳನ್ನು ಹೊರಹಾಕಲು ಸೂಕ್ತ ಮಾಧ್ಯಮವಾಗಿದೆ. ಹಾಗಾಗಿ ಸಾಹಿತ್ಯ ಕೃಷಿಯಲ್ಲಿ ವ್ಯವಹಾರಗಳನ್ನು ಮಾಡದೇ ಉತ್ತಮ ಸಾಹಿತ್ಯ ಪ್ರಕಾರಗಳು ಮೂಡಿ ಬರಲಿ ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಬೈಂದೂರು ಪ್ರಭಾಕರ ರಾವ್ ಸಭಾಭವನದಲ್ಲಿ ನಡೆದ ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಕುಮಾರಿ ಆಶಾದೇವಿ.ಕೆ.ಎಸ್ ಇವರ ಕಥಾಸಂಕಲನ ‘’ವಲ್ಡ್ ಆಫ್ ಮಾರ್ವೆಲ್’’ (world of marvel) ಎಂಬ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಇವರು, ಈಗ ನವರಾತ್ರಿಯ ಪರ್ವಕಾಲ ಎಲ್ಲೆಡೆಯೂ ಸರಸ್ವತಿ ದೇವಿಯ ಪೂಜೆ ನಡೆಯುತ್ತಿದೆ. ಹಾಗಾಗಿ ಈ ಕಾಲೇಜಿನಲ್ಲಿ ಮುಂದೆಯೂ ಕೂಡಾ ಅಕ್ಷರ ಸೇವೆ ಸದಾ ನಡೆಯುತ್ತಿರಲಿ ಎಂದರು. ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಎಚ್ ಇವರು ಕಥಾ ಸಂಕಲನವನ್ನು ವಿಮರ್ಶಿಸಿ ಆಶಾದೇವಿಯಂತಹ ಯುವ ಸಾಹಿತಿಗಳು ಸಮಾಜಕ್ಕೊಂದು ಮಾದರಿ ಎಂದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಜಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡಾ ಭಾಗವಹಿಸಿದಾಗ ಅವರ ಸರ್ವತೋಮುಖ ಬೆಳವಣಿಗೆ ಆಗಲು ಸಾಧ್ಯ ಎಂದರು. ಜೊತೆಗೆ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೋ. ಶಿವಪ್ರಸಾದ್ ಕೆ.ಎಸ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಿದ್ಯಾರ್ಥಿ ಲೇಖಕಿ ಕು.ಆಶಾದೇವಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪದ್ಮಶ್ರೀ ಪ್ರಾರ್ಥಿಸಿ, ಇಂಗ್ಲೀಷ್ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ರೇಖಾ ನಾಯರ್ ಸ್ವಾಗತಿಸಿ, ಶ್ರೀಮತಿ ಮೋತಿಬಾಯಿ ವಂದಿಸಿದರು ಅಲ್ಲದೇ ಶ್ರೀಮತಿ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.