Saturday, November 23, 2024
ಹೆಚ್ಚಿನ ಸುದ್ದಿ

ನ.1ರಿಂದ ಭದ್ರತಾ ನಂಬರ್ ಪ್ಲೇಟ್ ಗೆ ಆನ್ಲೈನ್ ಬುಕ್ಕಿಂಗ್ ಶುರು-ಕಹಳೆ ನ್ಯೂಸ್

ದೆಹಲಿಯಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್‌ಗಳಿಗಾಗಿ ಆನ್‌ಲೈನ್ ಬುಕಿಂಗ್ ಮತ್ತೆ ಶುರುವಾಗ್ತಿದೆ. ನವೆಂಬರ್ 1ರಿಂದ ಬುಕ್ಕಿಂಗ್ ಶುರುವಾಗಲಿದೆ. ಕೊರೊನಾ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಫಲಕಗಳು ಸಿದ್ಧವಾಗದ ಕಾರಣ ಸರ್ಕಾರ ಆನ್‌ಲೈನ್ ಬುಕಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮತ್ತೆ ಆನ್ಲೈನ್ ಬುಕ್ಕಿಂಗ್ ಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಹೋಮ್ ಡೆಲಿವರಿ ಪಡೆಯಲು ಚಾಲಕರು 100 ರಿಂದ 200 ರೂಪಾಯಿವರೆಗೆ ಹಣ ಪಾವತಿಸಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ವಾಹನಗಳ ಮಾಲೀಕರಿಗೆ 2019 ರ ಏಪ್ರಿಲ್ ಮೊದಲು ವಿಳಂಬವಿಲ್ಲದೆ ಎಚ್‌ಎಸ್‌ಆರ್‌ಪಿ ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್‌ಗಳನ್ನು ಸ್ವೀಕರಿಸುವಂತೆ ಕೇಳಿಕೊಂಡಿತ್ತು. ದೆಹಲಿಯಲ್ಲಿ ಸುಮಾರು 30 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್‌ಗಳನ್ನು ಹಾಕಬೇಕಿದೆ. ಪೆಟ್ರೋಲ್ ಹಾಗೂ ಡಿಸೇಲ್ ವಾಹನಗಳನ್ನು ಗುರುತಿಸಲು ಕಲರ್ ಕೋಡೆಡ್ ಸ್ಟಿಕ್ಕರ್ ಹಾಕಲಾಗುವುದು.

ಭದ್ರತಾ ನಂಬರ್ ಪ್ಲೇಟ್ ಬೆಲೆ ಬೇರೆ ಬೇರೆಯಿದೆ. ಕಾರಿಗೆ 600 ರಿಂದ 1000 ರೂಪಾಯಿ ಪಾವತಿಸಬೇಕು. ದ್ವಿಚಕ್ರ ವಾಹನಕ್ಕೆ 300-400 ರೂಪಾಯಿ ಪಾವತಿಸಬೇಕು. ವಾಹನದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಂಬರ್ ಪ್ಲೇಟ್ ಸಿದ್ಧಪಡಿಸಲಾಗಿದೆ. ಪ್ಲೇಟ್ ನಲ್ಲಿ ಒಂದು ಪಿನ್ ಇರುತ್ತದೆ. ಪಿನ್ ಒಮ್ಮೆ ವಾಹನದ ಪ್ಲೇಟ್ ಗೆ ಅಂಟಿಕೊಂಡ್ರೆ ಮತ್ತೆ ತೆಗೆಯಲು ಸಾಧ್ಯವಿಲ್ಲ.