Tuesday, April 1, 2025
ಅಂತಾರಾಷ್ಟ್ರೀಯ

BIG BREAKING-ಪುಲ್ವಾಮ ದಾಳಿ ಮಾಡಿಸಿದ್ದು ನಾವೇ: ಸತ್ಯ ಒಪ್ಪಿಕೊಂಡ ಪಾಕ್ ಸಚಿವ..! -ಕಹಳೆ ನ್ಯೂಸ್

ಇಸ್ಲಾಮಾಬಾದ್: ಪುಲ್ವಾಮ ಉಗ್ರರ ದಾಳಿಯ ಹೊಣೆಯನ್ನು ಪಾಕಿಸ್ತಾನ ಹೊತ್ತುಕೊಂಡಿದೆ. ಪಾಕಿಸ್ತಾನದ ಸಂಸತ್ ನಲ್ಲಿ ಸರ್ಕಾರದ ವತಿಯಿಂದಲೇ ಈ ಕುರಿತಂತೆ ಹೇಳಿಕೆ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುಲ್ವಾಮಾ ದಾಳಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ಸಾಧನೆಯಾಗಿದೆ ಎಂದು ಪಾಕಿಸ್ತಾನ ಸಂಸತ್ ಸಚಿವ ಪವಾದ್ ಚೌಧರಿ ಹೇಳಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮೂಲಕ ಪುಲ್ವಾಮ ದಾಳಿಯಲ್ಲಿ ಪಾಕಿಸ್ತಾನ ಪಾತ್ರವಿರುವುದನ್ನು ಪಾಕ್ ಸರ್ಕಾರವೇ ಒಪ್ಪಿಕೊಂಡಿದೆ. ಪುಲ್ವಾಮ ದಾಳಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪವಾರ್ ಚೌಧರಿ ಹೇಳಿಕೆ ನೀಡಿದ್ದಾರೆ.

ಪುಲ್ವಾಮ ಭಯೋತ್ಪಾದಕರ ದಾಳಿಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸುತ್ತಿದ್ದ ಪಾಕಿಸ್ತಾನ ಸುಳ್ಳು ಹೇಳುತ್ತಿತ್ತು. ಈಗ ಇಮ್ರಾನ್ ಖಾನ್ ಮಂತ್ರಿ ಮಂಡಲದ ಸಚಿವರೇ ಇದನ್ನು ಒಪ್ಪಿಕೊಂಡಿದ್ದು ಇಮ್ರಾನ್ ಖಾನ್ ಆಡಳಿತದ ನಿರ್ದೇಶನದ ಮೇರೆಗೆ ಭೀಕರ ದಾಳಿ ನಡೆಸಲಾಗಿತ್ತು ಎಂದು ಸಚಿವ ಚೌಧರಿ ಹುಸೇನ್ ತಿಳಿಸಿದ್ದು, ಪುಲ್ವಾಮ ದಾಳಿಯನ್ನು ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ದೊಡ್ಡ ಸಾಧನೆ ಎಂದು ಹೇಳಿದ್ದಾರೆ.

ನಾವು ಭಾರತದ ಪ್ರದೇಶದೊಳಗೆ ನುಗ್ಗಿ ಯಶಸ್ಸಿನ ಕಾರ್ಯಾಚರಣೆ ನಡೆಸಿದ್ದು ನಾವೆಲ್ಲರೂ ಯಶಸ್ಸಿನ ಭಾಗವಾಗಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. 2019 ಫೆಬ್ರವರಿ 14ರಂದು ಶ್ರೀನಗರ -ಜಮ್ಮು ಹೆದ್ದಾರಿಯಲ್ಲಿ ಸಿಆರ್ಪಿಎಫ್ ವಾಹನಕ್ಕೆ ಭಾರೀ ಪ್ರಮಾಣದ ಸ್ಪೋಟಕ ತುಂಬಿದ್ದ ವಾಹನ ಡಿಕ್ಕಿ ಹೊಡೆಸಲಾಗಿತ್ತು. ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ