Monday, January 20, 2025
ಬೆಳ್ತಂಗಡಿರಾಜಕೀಯಸುದ್ದಿ

ಹರೀಶ್ ಪೂಂಜರಿಗೆ ಕೊರೊನಾ ಪಾಸಿಟಿವ್ ಆದಾಗ‌ ನಾಟಕ‌ ಅಂದಿದ್ದ ಮಾಜಿ ಶಾಸಕ‌ ವಸಂತ ಬಂಗೇರಾಗೆ ಕೊರೊನಾ ಪಾಸಿಟಿವ್ : ‘ ಬೇಗ ಗುಣಮುಖರಾಗಿ ಬನ್ನಿ ಬಂಗೇರಾ ಜಿ…’ ಶಾಸಕ ಹರೀಶ್ ಪೂಂಜ ಹಾರೈಕೆ ” ಪಾಸಿಟಿವ್ ರಾಜಕೀಯ ” – ಕಹಳೆ ನ್ಯೂಸ್

ಬೆಳ್ತಂಗಡಿ: ಮಾಜಿ ಶಾಸಕ ಕೆ. ವಸಂತ ಬಂಗೇರ ಅವರಿಗೆ ಕೋವಿಡ್ -19 ಸೋಂಕು ಧೃಢ ಪಟ್ಟಿದೆ. ಈ ಹಿನ್ನಲೆಯಲ್ಲಿ ಬಂಗೇರ ಹೋಂ ಸೆಲ್ಪ್ ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ. ಮಾಜಿ ಶಾಸಕ ಬಂಗೇರ ಸ್ವಯಂ ಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಂಡಿದ್ದು, ಆಗ ಪಾಸಿಟಿವ್ ಎಂದು ದೃಢಪಟ್ಟ ಹಿನ್ನಲೆಯಲ್ಲಿ ಮನೆಯಲ್ಲಿ ಸೆಲ್ಪ್ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ ಎಂದು ಬಂಗೇರ ಆಪ್ತರು ತಿಳಿಸಿದ್ದಾರೆ.

ಪಾಸಿಟಿವ್ ರಾಜಕೀಯ :

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದು ತಾಲೂಕಿನ ಶಾಸಕ ಹರೀಶ್ ಪೂಂಜರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಾಗ ಇದೇ ಮಾಜಿ ಶಾಸಕ ನಾಲಿಗೆ ಹರಿಬಿಟ್ಟಿದ್ದು, ಕೆಲವರು ನಾಟಕ ಮಾಡುತ್ತಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ ಕುರಿತು ಶಾಸಕ ಪೂಂಜ ಕೂಡ ಅವತ್ತು ಪ್ರತಿಕ್ರಿಯೆ ನೀಡಿದ್ದರು. ಆದರೆ, ಇಂದು ಬಂಗೇರಾಗೆ ಕೊರೊನಾ ಪಾಸಿಟಿವ್ ಆದ ವಿಷಯ ತಿಳಿದ ತಕ್ಷಣವೇ ಶಾಸಕ ಪೂಂಜ ಕಂಬನಿ ಮಿಡಿದಿದ್ದಾರೆ. ಈ ಕುರಿತು Facebook ಪೋಸ್ಟ್ ಹಾಕಿದ ಪೂಂಜ ” ಹಿರಿಯರು, ಬೆಳ್ತಂಗಡಿಯ ಮಾಜಿ ಶಾಸಕರಾದ ಶ್ರೀ ವಸಂತ್ ಬಂಗೇರ ಅವರಿಗೆ ಕೊರೊನಾ ಪರೀಕ್ಷೆಯಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದೆ ಎಂಬ ವಿಚಾರ ತಿಳಿದು ಆಘಾತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ಸೋಂಕಿನಿಂದ ಶ್ರೀಯುತರು ಆದಷ್ಟು ಶೀಘ್ರ ಗುಣಮುಖರಾಗಿ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಪಾದದಲ್ಲಿ ಪ್ರಾರ್ಥನೆ.

ಬೇಗ ಗುಣಮುಖರಾಗಿ ಬನ್ನಿ ಬಂಗೇರಾ ಜಿ… “ ಎಂದಿದ್ದಾರೆ.

ಹರೀಶ್ ಪೂಂಜ Facebook Post ಏನು..!? :

ಅಂದು ಬಂಗೇರಾ ಹೇಳಿದ್ದೇನು…!? ಹರೀಶ್ ಪೂಂಜ ಪ್ರತಿಕ್ರಿಯೆ ಏನು..!? :

ಈಗ ತಾಲೂಕಿನ ಜನತೆ ಪೂಂಜರಾದ ಮಾನವೀಯ ಸ್ಪಂದನೆಗೆ ಜೈ ಎನ್ನುತ್ತಿದ್ದಾರೆ. ಬಂಗೇರಾ ಅಂದು ಆಡಿದ್ದ ಅಹಂಕಾರದ ಮಾತುಗಳನ್ನು ಮೆಲುಕುಹಾಕುತ್ತಾ ಪೂಂಜಾರ ಗುಣಗಾನ ಮಾಡುತ್ತಿದ್ದಾರೆ.