ಸುರತ್ಕಲ್ ನಲ್ಲಿ ರಸ್ತೆ ಮಧ್ಯದಲ್ಲೇ ಕಾಂಗ್ರೇಸ್ ವೇದಿಕೆ ಪರದಾಡಿದ ಸಾರ್ವಜನಿಕರು ; ಕಾರ್ಯಕರ್ತರನ್ನುದ್ದೇಶಿಸಿ ಪಪ್ಪು ಭಾಷಣ – ಕಹಳೆ ನ್ಯೂಸ್
ಮಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಜಿಲ್ಲೆಗಳ ಜನಾಶೀರ್ವಾದ ಯಾತ್ರೆಯ ರೋಡ್ ಶೋ ನಲ್ಲಿ ಭಾಗವಹಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಮುಲ್ಕಿ ಹಾಗೂ ಸುರತ್ಕಲ್ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ರಸ್ತೆ ಮಾರ್ಗವಾಗಿ ಪ್ರಯಾಣಿಸಿದ್ದರು. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತೆ ದೃಷ್ಠಿಯಿಂದ ರಸ್ತೆಯ ಒಂದು ಕಡೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಬಂದಿದ್ದ ಜನರು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿದರ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬ್ಲಾಕ್ ಆಗಿತ್ತು. ಹೀಗಾಗಿ ಉರಿಯುವ ಬಿಸಿಲಿನಲ್ಲಿ ವಾಹನ ಸವಾರರು ರಸ್ತೆಯ ಮಧ್ಯೆ ನಿಂತು ಪರದಾಡುವಂತಾಯಿತು.
ರಸ್ತೆ ಮಧ್ಯದಲ್ಲೇ ಕಾಂಗ್ರೇಸ್ ವೇದಿಕೆ :
ಇನ್ನೂ ಸುರತ್ಕಲ್ ನಲ್ಲಿ ನಡೆದ ಜನಾಶೀರ್ವಾದ ಯಾತ್ರೆಗಾಗಿ ಸ್ಥಳೀಯ ಶಾಸಕ ಮೊಯಿದ್ದಿನ್ ಬಾವಾ ಸುರತ್ಕಲ್ ಜಂಕ್ಷನ್ ರಸ್ತೆ ಮಧ್ಯಭಾಗದಲ್ಲಿ ವೇದಿಕೆ ಹಾಕಿದ್ದರು. ಇಲ್ಲೇ ಜನಾಶೀರ್ವಾದ ಯಾತ್ರೆಯ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಒಟ್ಟಾರೆ ರಾಹುಲ್ ಗಾಂಧಿಯವರ ಮಿಂಚಿನ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಸವಾರರು ಮಾತ್ರ ಕೆಲ ಕಾಲ ಸುಡುಬಿಸಿನಲ್ಲಿ ತಟಸ್ಥರಾಗಿ ಕಾಯಬೇಕಾಯಿತು.