Monday, January 20, 2025
ಪುತ್ತೂರು

ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ ;‌ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗುವ ಸೌಭಾಗ್ಯ ನೂತನ ಸಮಿತಿಗೆ..! – ಕಹಳೆ ನ್ಯೂಸ್

ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಒಂಬತ್ತು ಸದಸ್ಯ ಸ್ಥಾನಗಳ ಪೈಕಿ ಏಳು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಎಂದರೆ ‘ಸಾಮಾನ್ಯ’ ಕ್ಕೆ ನಿಗದಿಯಾಗಿರುವ ಎರಡು ಸ್ಥಾನಕ್ಕೆ ಯಾರನ್ನೂ ಪರಿಗಣನೆ ಮಾಡಲಾಗಿಲ್ಲ.

ಜಿಲ್ಲಾ ಧಾರ್ಮಿಕ‌ ಪರಿಷತ್ ನ ಸದಸ್ಯ ಕಾರ್ಯದರ್ಶಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಗಳ ಸಹಾಯಕ ಆಯುಕ್ತರು ಮುಜರಾಯಿ ಇಲಾಖೆಯಡಿಯ ‘ಸಿ’ ಪ್ರವರ್ಗದಲ್ಲಿರುವ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನ ಅರ್ಚಕರು ಅಥವಾ ಅರ್ಚಕರ ಪೈಕಿ ಓರ್ವರು, ‘ಮಹಿಳಾ’ ಕ್ಷೇತ್ರದಿಂದ ರಶ್ಮಿ ನಿರಂಜನ ರೈ ಮಠಂತಬೆಟ್ಟು, ಶಶಿಕಲಾ ಶಿವಪ್ರಕಾಶ್ ಕೋಡಿ ಮೋನಡ್ಕ, ‘ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ’ದಿಂದ ಉದಯ ನಾಯ್ಕ ತುರ್ಗೆದಗುರಿ,‌ ‘ಸಾಮಾನ್ಯ’ ಕ್ಷೇತ್ರದಿಂದ ಅಶೋಕ್ ಕುಮಾರ್ ರೈ ಕೆ.ಯಸ್ ಕೋಡಿಂಬಾಡಿ ರೈ ಎಸ್ಟೇಟ್, ಬಾಬು ಗೌಡ ಭಂಡಾರದಮನೆ ಮತ್ತು ಗಂಗಾಧರ ಶೆಟ್ಟಿ ಮಠಂತಬೆಟ್ಟುರವರನ್ನು ಆಯ್ಕೆ ಮಾಡಲಾಗಿದೆ. ಇನ್ನುಳಿದ ಎರಡು ‘ಸಾಮಾನ್ಯ’ ಕ್ಷೇತ್ರದಲ್ಲಿ ಆಯ್ಕೆ ಬಯಸಿ ಐದಾರು ಮಂದಿ ಅರ್ಜಿ ಸಲ್ಲಿಸಿದ್ದರಾದರೂ ಈ ಎರಡು ಸ್ಥಾನಗಳಿಗೆ ಯಾರನ್ನೂ ಪರಿಗಣಿಸಲಾಗಿಲ್ಲ ಎಂದು ತಿಳಿಸಲಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿಯೂ ರಾಜಕೀಯ ಪ್ರವೇಶ ಆಗುತ್ತಿರುವ ಹಿನ್ನೆಲೆಯಲ್ಲಿ ಎರಡು ಸ್ಥಾನಗಳ ಆಯ್ಕೆಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು