Tuesday, January 21, 2025
ಸುದ್ದಿ

ಕಸದ ಜೊತೆಗೆ ಸಿಕ್ಕಿದ ಚಿನ್ನವನ್ನು ಮರಳಿಸಿ, ಪ್ರಾಮಾಣಿತೆ ಮೆರೆದ ಪೌರಕಾರ್ಮಿಕರು- ಕಹಳೆ ನ್ಯೂಸ್

ಕಾಪು: ಫ್ಲ್ಯಾಟ್ ವೊಂದರ ಕಸ ಸಂಗ್ರಹಣೆ ವೇಳೆ ದೊರಕಿದ ಚಿನ್ನದ ಬ್ರಾಸ್ ಲೆಟ್ ನ್ನು ವಾರಸುದಾರರಿಗೆ ಮರಳಿಸುವ ಮೂಲಕ ಕಾಪು ಪುರಸಭೆಯ ಪೌರ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು ಕೊಪ್ಪಲಂಗಡಿ ಅನಸೂಯ ಎನ್ ಕ್ಲೇವ್ ನ ನಿವಾಸಿ ಮಹಮ್ಮದ್ ಸಫ್ವಾನ್ ಎಂಬವರ 16 ಗ್ರಾಂ. ತೂಕದ ಚಿನ್ನದ ಬ್ರಾಸ್ ಲೆಟ್ ಬುಧವಾರ ಕಸದ ಜೊತೆಗೆ ಕಳೆದು ಹೋಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದು ಹೋಗಿದ್ದ 16 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್ ಕಸದ ಜೊತೆಗೆ ತ್ಯಾಜ್ಯ ವಿಲೇವಾರಿ ಘಟಕವನ್ನು ಸೇರುವುದರಲ್ಲಿತ್ತು. ಆದರೆ ಅಷ್ಟರಲ್ಲೇ ಅದನ್ನು ಗಮನಿಸಿದ ಪೌರ ಕಾರ್ಮಿಕರು ತೆಗೆದಿರಿಸಿ, ಅದನ್ನು ವಾಪಾಸು ತಂದು ವಾರಸುದಾರರಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅನಸೂಯಾ ಎನ್ ಕ್ಲೇವ್ ನ ಮಹಮ್ಮದ್ ಸಫಾನ್ ಅವರ ಚಿನ್ನದ ಬ್ರಾಸ್ ಲೆಟ್ ನ್ನು ವಾಚ್ ಮೆನ್ ನ ಮೂಲಕವಾಗಿ ಪೌರಕಾರ್ಮಿಕರಾದ ಸುಧೀರ್ ಸುವರ್ಣ, ವಿಜಯ್, ಸುನೀಲ್ ಮರಳಿ ತಂದು ಕೊಟ್ಟಿದ್ದಾರೆ.
ಪ್ರಾಮಾಣಿಕತೆ ಮೆರೆದಿರುವ ಕಾಪು ಪುರಸಭೆಯ ಕಾರ್ಮಿಕರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಚಿನ್ನ ಮರಳಿ ಸಿಕ್ಕಿದ ಖುಷಿಯಲ್ಲಿ ವಾರಸುದಾರರು ನಗದು ಪುರಸ್ಕಾರ ನೀಡಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.