Monday, January 20, 2025
ಸುದ್ದಿ

ಚಲನಚಿತ್ರ, ಟಿವಿ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಇನ್ಮುಂದೆ ನಟಿಸುವಂತಿಲ್ಲ!-ಕಹಳೆ ನ್ಯೂಸ್

ಬೆಂಗಳೂರು: ಸರ್ಕಾರಿ ನೌಕರರು ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಸುವುದನ್ನು ನಿಷೇಧಿಸುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕಳೆದ ಅಕ್ಟೋಬರ್ 27 ರಂದು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳು 2020ರ ಕರಡು ಪ್ರತಿಯನ್ನು ಪ್ರಕಟಿಸಿದೆ. ಈ ಕರಡು ಪ್ರತಿಯಲ್ಲಿ ಸರ್ಕಾರಿ ನೌಕರರು ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು ಎಂಬುದರ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿ ಕರಡು ನಿಯಮಾವಳಿಗಳನ್ನು ಪ್ರಕಟ ಮಾಡಿದ್ದು, ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿದೆ.

ಕರಡು ಗೆಜೆಟ್ ಅಧಿಸೂಚನೆಯಲ್ಲಿ ಜನರು ತಮ್ಮ ಸಲಹೆಗಳನ್ನು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲು ಸರ್ಕಾರ 15 ದಿನಗಳ ಕಾಲಾವಕಾಶ ನೀಡಿದೆ. ಸರ್ಕಾರಿ ನೌಕರರು ಪತ್ರಿಕೆ, ರೇಡಿಯೋ, ದೂರದರ್ಶನ ಅಥವಾ ಯಾವುದೇ ರೀತಿಯ ಪ್ರದರ್ಶನ ಕಲೆಗಳು, ಸಮೂಹ ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸುವುದು ಅಥವಾ ಪುಸ್ತಕಗಳನ್ನು ಬರೆಯುವುದು, ಲೇಖನಗಳು ಪ್ರಕಟಿಸುವುದು ಸೆರಿದಂತೆ ಹಲವು ನಿಯಮಗಳನ್ನು ಹೊರಡಿಸಿದೆ. ಸಾರ್ವಜನಿಕರ ಅಭಿಪ್ರಾಯ ಪಡೆದ ಬಳಿಕ ನಿಯಮಾವಳಿಗಳನ್ನು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಂತಿಗೊಳಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರಿ ನೌಕರರು ಪೂರ್ವಾನುಮತಿ ಪಡೆಯದೇ ಯಾವುದೇ ಪತ್ರಿಕೆ ಅಥವಾ ನಿಯತಕಾಲಿಕದಲ್ಲಿ ಬರೆಯುವುದು, ಲೇಖನ ಪ್ರಕಟಿಸುವುದಕ್ಕೆ ನಿಯಂತ್ರಣ ಹೇರುತ್ತದೆ. ಜೊತೆಗೆ ಯಾವುದೇ ಸರ್ಕಾರಿ ನೌಕರರು ಅನುಮತಿ ಪಡೆಯದೇ ಚಲನಚಿತ್ರಗಳು ಮತ್ತು ಟೆಲಿವಿಷನ್ ಧಾರಾವಾಹಿಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಯೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಬಾರದು ಎಂಬುದು ಕರಡು ನಿಯಮದಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರಿ ನೌಕರರರು ರೇಡಿಯೋ, ಟೆಲಿವಿಷನ್ ಸೇರಿದಂತೆ ಪ್ರಾಯೋಜಿತ ಮಾಧ್ಯಮ ಕಾರ್ಯಕ್ರಮದಲ್ಲಿ ಅಥವಾ ಸರ್ಕಾರದ ಮಾಧ್ಯಮದ ಕಾರ್ಯಕ್ರಮದಲ್ಲಿಯೂ ಭಾಗವಹಿಸುವಂತಿಲ್ಲ. ಕರಡು ನಿಯಮ ಕಾಯ್ದೆಯಾಗಿ ಜಾರಿಯಾದ ಬಳಿಕ ಸರ್ಕಾರಿ ನೌಕರರು ಯಾವುದೇ ಪುಸ್ತಕವನ್ನು ಪ್ರಕಟಿಸುವುದು ಅಥವಾ ಯಾವುದೇ ರೀತಿಯ ಸಾಹಿತ್ಯಿಕ ಅಥವಾ ಕಲಾತ್ಮಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ನಿಯಮಾವಳಿ ನಿಷೇಧಿಸಿದೆ.