ಅಯೋಧ್ಯಾ: 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ವಿವಾದಿತ ಪ್ರದೇಶದಲ್ಲಿ ಯಾವುದೇ ಹಬ್ಬಗಳ ಆಚರಣೆ ಇರ್ಲಿಲ್ಲ. ಆದ್ರೆ, ಈಗ ರಾಮಮಂದಿರ ನಿರ್ಮಾಣವಾಗುತ್ತಿದ್ದು, ದೀಪಾವಳಿ ಆಚರಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಮೂಲಕ ಬರೋಬ್ಬರಿ 28 ವರ್ಷಗಳ ನಂತ್ರ ರಾಮ ಮಂದಿರದಲ್ಲಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ.
ಹೌದು, ಇಷ್ಟು ವರ್ಷಗಳ ಕಾಲ ಪುಟ್ಟ ಟೆಂಟ್ನಲ್ಲಿದ್ದ ಶ್ರೀರಾಮನ ವಿಗ್ರಹವನ್ನ ತಾತ್ಕಾಲಿಕವಾಗಿ ದೇಗುಲದ ಆವರಣಕ್ಕೆ ವರ್ಗಾವಣೆ ಮಾಡಲಾಗಿದೆ. ಅದೇ ಜಾಗದಲ್ಲಿಯೇ ದೀಪಾವಳಿಯನ್ನ ಸಂಭ್ರಮದಿಂದ ಆಚರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಜನೆ ಹಾಕುತ್ತಿದ್ದಾರೆ.
ಅಂದಿನ ದಿನ ಕೇವಲ ದೇವಾಲಯ ಮಾತ್ರವಲ್ಲ ಇಡೀ ಅಯೋಧ್ಯೆ, ಸರಯೂ ನದಿ ದಂಡ ದೀಪಗಳಿಂದ ಜಗಮಗಿಸಲಿದೆ. ಅಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಥಮ ಆರತಿ ಬೆಳಗಲಿದ್ದು, ಅದಾದ ಬಳಿಕ ದೀಪ ಬೆಳಗುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗ್ತಿದೆ.