Monday, January 20, 2025
ಪುತ್ತೂರುಸುದ್ದಿ

21 ದಿನಗಳ ” ರೋಟರಿ ಮಿಷನ್ ಫಿಟ್ ” ಕಾರ್ಯಕ್ರಮಕ್ಕೆ ನಾಳೆ ಚಾಲನೆ ; ರೋಟರಿ ಪುತ್ತೂರು ಯುವಾ ನೇತೃತ್ವದಲ್ಲಿ ” ಫಿಟ್ ಇಂಡಿಯಾ ” ಅಭಿಯಾನಕ್ಕೆ ಸಾಥ್..! – ಕಹಳೆ ನ್ಯೂಸ್

ಪುತ್ತೂರು: ಭಾರತದಾದ್ಯಂತ ನಡೆಯುತ್ತಿರುವ “ಫಿಟ್ ಇಂಡಿಯಾ” ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ಯುವದ ವತಿಯಿಂದ ಸಂತ ಫಿಲೋಮಿನಾ ಕಾಲೇಜಿನ ಸಹಯೋಗದೊಂದಿಗೆ 21 ದಿನಗಳ ರೋಟರಿ ಮಿಷನ್ ಫಿಟ್ ಪುತ್ತೂರು ಕಾರ್ಯಕ್ರಮವನ್ನು ನ 1 ರಿಂದ 21 ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಚೇರ್ ಮೆನ್ ಪಶುಪತಿ ಶರ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಮುಖ್ಯ ಉದ್ದೇಶ ಪುತ್ತೂರಿನ ನಾಗರೀಕರಿಗೆ ಸರಳ ವ್ಯಾಯಮದ ಮೂಲಕ ತಮ್ಮ ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಸರಿಯಾದ ಆಹಾರ ಸೇವನೆಯೊಂದಿಗೆ ಸರಿಯಾದ ವ್ಯಾಯಾಮ, ದೇಹಕ್ಕೆ ದಿನದಲ್ಲಿ ಒಂದು ಗಂಟೆಯಾದರೂ ವ್ಯಾಯಾಮ ಅತ್ಯಗತ್ಯ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ನೃತ್ಯಪಟುವಾದ ಎಲ್ಯಾಸ್ ಪಿಂಟೋರವರು ಸರಳ ವ್ಯಾಯಾಮಗಳನ್ನು ಎರೋಬಿಕ್ಸ್, ಝುಂಬಾ, ಹೇಳಿಕೊಡುವುದರೊಂದಿಗೆ ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳುವ ಬಗ್ಗೆ ತರಬೇತಿ ನೀಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಜೀವನದಲ್ಲಿ ಸರಳ ಯೋಗ, ಡಯಟ್, ಹೃದಯಾಘಾತ ಸಂಭವಿಸಿದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆ, ಕೊಲೆಸ್ಟ್ರಾಲ್ ಹಲವು ತಜ್ಞ ವೈದ್ಯರುಗಳಿಂದ ವಿಶೇಷ ಮಾಹಿತಿ ಕಾರ್ಯಕ್ರಮ ಇನ್ನೂ ಅನೇಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕಾರ್ಯಕ್ರಮಗಳು ಈ ದಿನಗಳಲ್ಲಿ ಜರುಗಲಿವೆ.ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಸಹಯೋಗದೊಂದಿಗೆ BMI, ಶುಗರ್ ಲೆವೆಲ್, ಬಿ.ಪಿ ಟೆಸ್ಟ್, ಇನ್ನಿತರ ತಪಾಸಣೆ ಉಚಿತವಾಗಿ ಜರುಗಲಿವೆ. ನವೆಂಬರ್ 1 ರಿಂದ ದಿನಾ ಬೆಳಗ್ಗೆ 6.30 ರಿಂದ 7.30 ರವರೆಗೆ ನಡೆಯುವ ಈ ಆರೋಗ್ಯ ಕಾಪಾಡಿಕೊಳ್ಳುವ ಕಾರ್ಯಾಗಾರ 21 ದಿನಗಳವರೆಗೆ ಉಚಿತವಾಗಿ ಜರುಗಲಿರುವುದು. ಹೆಚ್ಚಿನ ಮಾಹಿತಿಗೆ ಮತ್ತು ನೋಂದಾವಣೆಗಾಗಿ ಕಾರ್ಯಕ್ರಮದ ಛೇರ್‌ಮೆನ್ ಪಶುಪತಿ ಶರ್ಮರವರನ್ನು 9448546663, 9845522020ನ್ನು ಸಂಪರ್ಕಿಸುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಡಾ.ಹರ್ಷಕುಮಾರ್ ರೈ ಮಾಡಾವು, ತರಬೇತಿ‌ ನೀಡಲಿರುವ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ನೃತ್ಯಪಟುವಾದ ಎಲ್ಯಾಸ್ ಪಿಂಟೋ, ರೋಟರಿ ಯುವದ ಪೂರ್ವಾಧ್ಯಕ್ಷ ಚೇತನ್ ಪ್ರಕಾಶ್ ಕಜೆ, ಜಿಲ್ಲಾ ಗರ್ವನರ್ ರತ್ನಾಕರ ರೈ ಕೆದಂಬಾಡಿಗುತ್ತು ಉಪಸ್ಥಿತರಿದ್ದರು.