Saturday, November 23, 2024
ಹೆಚ್ಚಿನ ಸುದ್ದಿ

ಸಾರ್ವಜನಿಕರೇ ಗಮನಿಸಿ: ನಾಳೆಯಿಂದ ಬದಲಾಗಲಿದೆ ಈ ಎಲ್ಲ ನಿಯಮಗಳು-ಕಹಳೆ ನ್ಯೂಸ್

ನಾಳೆ ನವೆಂಬರ್ ಒಂದು. ನಾಳೆಯಿಂದ ಅನೇಕ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಎಲ್ಪಿಜಿ ಸಿಲಿಂಡರ್ ನಿಂದ ಹಿಡಿದು ರೈಲ್ವೆ ಟೈಮ್ ಟೇಬಲ್ ವರೆಗೆ ಅನೇಕ ಸಂಗತಿಗಳಲ್ಲಿ ಬದಲಾವಣೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯ ನಿಯಮಗಳು ನವೆಂಬರ್ 1 ರಿಂದ ಬದಲಾಗಲಿದೆ. ತೈಲ ಕಂಪನಿಗಳು ನವೆಂಬರ್ 1 ರಿಂದ ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ವ್ಯವಸ್ಥೆಯನ್ನು ಜಾರಿಗೆ ತರಲಿವೆ. ಸಿಲಿಂಡರ್ ಸ್ವೀಕರಿಸುವ ಮೊದಲು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಮನೆಗೆ ಸಿಲಿಂಡರ್ ಬಂದಾಗ, ಆ ಒಟಿಪಿಯನ್ನು ಡೆಲಿವರಿ ಹುಡುಗನೊಂದಿಗೆ ತೋರಿಸಬೇಕಾಗುತ್ತದೆ. ಒಟಿಪಿ ಹೊಂದಿಕೆಯಾದಾಗ ಸಿಲಿಂಡರ್ ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂಡೇನ್ ಗ್ಯಾಸ್ ಬುಕ್ಕಿಂಗ್ ಸಂಖ್ಯೆ ಬದಲಾಗಲಿದೆ. ಹಳೆಯ ಸಂಖ್ಯೆಯಲ್ಲಿ ಗ್ಯಾಸ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಇಂಡೇನ್ ತನ್ನ ಎಲ್ಪಿಜಿ ಗ್ರಾಹಕರಿಗೆ ಹೊಸ ನಂಬರ್ ರವಾನೆ ಮಾಡಿದೆ. ಇಂಡೇನ್ ಗ್ಯಾಸ್ ಗ್ರಾಹಕರು ಎಲ್ಪಿಜಿ ಸಿಲಿಂಡರ್ ಬುಕ್ ಮಾಡಲು 7718955555 ಗೆ ಕರೆ ಅಥವಾ ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ.

ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ನಿರ್ಧರಿಸುತ್ತವೆ. ಬೆಲೆ ಹೆಚ್ಚು ಅಥವಾ ಕಡಿಮೆಯಾಗಬಹುದು. ಅಕ್ಟೋಬರ್‌ನಲ್ಲಿ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದ್ದವು. ನಾಳೆ ಸಿಲಿಂಡರ್ ಹೊಸ ಬೆಲೆ ತಿಳಿಯಲಿದೆ.

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯಿದೆ. ನವೆಂಬರ್ 1 ರಿಂದ ಭಾರತೀಯ ರೈಲ್ವೆ ದೇಶಾದ್ಯಂತ ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಿದೆ. ರೈಲುಗಳ ಹೊಸ ವೇಳಾಪಟ್ಟಿಯನ್ನು ನವೆಂಬರ್ 1 ರಂದು ಬಿಡುಗಡೆ ಮಾಡಲಾಗುವುದು. 13 ಸಾವಿರ ಪ್ರಯಾಣಿಕ ರೈಲು ಮತ್ತು 7 ಸಾವಿರ ಸರಕು ರೈಲುಗಳ ಸಮಯ ಬದಲಾಗಲಿದೆ.

ನವೆಂಬರ್ 1 ರಿಂದ ಎಸ್‌ಬಿಐನ ಕೆಲವು ಪ್ರಮುಖ ನಿಯಮಗಳು ಬದಲಾಗಲಿದೆ. ಎಸ್‌ಬಿಐ ಉಳಿತಾಯ ಖಾತೆದಾರರಿಗೆ ಕಡಿಮೆ ಬಡ್ಡಿ ಸಿಗಲಿದೆ. ನವೆಂಬರ್ 1 ರಿಂದ 1 ಲಕ್ಷ ರೂಪಾಯಿಗಳವರೆಗೆ ಠೇವಣಿ ಇರಿಸಿದ ಉಳಿತಾಯ ಖಾತೆಯ ಬಡ್ಡಿದರವನ್ನು ಶೇಕಡಾ 0.25 ರಷ್ಟು ಇಳಿಸಲಾಗುವುದು. 1 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಠೇವಣಿಗಳ ಮೇಲೆ ರೆಪೋ ದರಕ್ಕೆ ಅನುಗುಣವಾಗಿ ಬಡ್ಡಿ ಲಭ್ಯವಾಗಲಿದೆ.