ಖರ್ಜೂರದ ಲಡ್ಡು – ಅಡುಗೆ ಮನೆ
ಬೇಕಾಗುವ ಪದಾರ್ಥಗಳು
- ಖರ್ಜೂರ 1 ಬಟ್ಟಲು
- ತುಪ್ಪ – 2 ಚಮಚ
- ಬಾದಾಮಿ – ಕತ್ತರಿಸಿದ್ದು ಸ್ವಲ್ಪ
- ಗೋಡಂಬಿ- ಕತ್ತರಿಸಿದ್ದು ಸ್ವಲ್ಪ
- ದ್ರಾಕ್ಷಿ – 2 ಚಮಚ
- ತುರಿದ ಕೊಬ್ಬರಿ – ಸ್ವಲ್ಪ
- ಗಸಗಸೆ – 1 ಚಮಚ
ಮಾಡುವ ವಿಧಾನ…
- ಮೊದಲು ಖರ್ಜೂರವನ್ನು ತೆಗೆದುಕೊಂಡು ಬೀಜ ತೆಗೆದು ರುಬ್ಬಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಚಮಚ ತುಪ್ಪವನ್ನು ಹಾಕಬೇಕು. ನಂತರ ಬಾದಾಮಿ, ಗೋಡಂಬಿ, ದ್ರಾಕ್ಷಿ, ಕೊಬ್ಬರಿ, ಗಸಗಸೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ರುಬ್ಬಿಕೊಂಡ ಖರ್ಜೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು,
- ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿದರೆ ರುಚಿಕರ ಹಾಗೂ ಆರೋಗ್ಯಕರವಾದ ಖರ್ಜೂರದ ಲಡ್ಡು ಸವಿಯಲು ಸಿದ್ಧ.