Monday, January 20, 2025
ಹೆಚ್ಚಿನ ಸುದ್ದಿ

ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ ಎಂದು ಕೆಲಸ ಸಿಕ್ಕ ಖುಷಿಯಲ್ಲಿ ಪ್ರಾಣಕೊಟ್ಟು ಹರಕೆ ತೀರಿಸಿದ-ಕಹಳೆ ನ್ಯೂಸ್

ಕೆಲಸವಿಲ್ಲ ಎಂದು ಪರಿತಪಿಸುತ್ತಿದ್ದ ವ್ಯಕ್ತಿ, ಒಂದೊಳ್ಳೆ ಉದ್ಯೋಗ ಸಿಕ್ಕ ತಕ್ಷಣ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದಾಗಿ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮಿಳುನಾಡಿನ ನಾಗರ್​​​ಕೊಯಿಲ್​​ ನಿವಾಸಿ ನವೀನ್​ (32) ಮೃತ. ಜೀವನದಲ್ಲಿ ತುಂಬ ದಿನಗಳಿಂದ ಉದ್ಯೋಗ ಸಿಕ್ಕಿರಲಿಲ್ಲ ಎಂದು ನೊಂದಿದ್ದ. ಹಾಗೇ ‘ನನಗೊಂದು ಒಳ್ಳೆಯ ಕೆಲಸ ಸಿಕ್ಕಿಬಿಟ್ಟರೆ ನಾನು ಬಂದು ನಿನ್ನೊಂದಿಗೇ ಇರುತ್ತೇನೆ’ ಎಂದು ದೇವರಿಗೆ ಹರಕೆಯನ್ನೂ ಕಟ್ಟಿಕೊಂಡಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದಾದ ಕೆಲವೇ ದಿನಗಳಲ್ಲಿ ನವೀನ್​ಗೆ ಬ್ಯಾಂಕ್​ ಆಫ್​ ಇಂಡಿಯಾದ ಮುಂಬೈ ಬ್ರ್ಯಾಂಚ್​​​ನಲ್ಲಿ ಒಂದೊಳ್ಳೆ ಉದ್ಯೋಗವೂ ಸಿಕ್ಕಿತು. ಆದರೆ ನವೀನ್ ಅಲ್ಲಿ​ ಕೆಲಸ ಮಾಡಿದ್ದು 15 ದಿನಗಳು ಮಾತ್ರ. ಶುಕ್ರವಾರ ತನ್ನ ತಿರುವನಂತಪುರಂಗೆ ವಿಮಾನದ ಮೂಲಕ ತೆರಳಿದ ನವೀನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾನು ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು. ನನಗೆ ಉದ್ಯೋಗ ಕೊಡು ಎಂಬ ಬೇಡಿಕೆಯನ್ನು ದೇವರು ಈಡೇರಿಸಿದ್ದಾನೆ. ಹಾಗೇ ಅವನೊಂದಿಗೇ ಇರಲು ನಾನು ಅಲ್ಲಿಯೇ ಹೋಗುತ್ತೇನೆ ಎಂದು ಡೆತ್​ನೋಟ್​ ಬರೆದಿಟ್ಟಿದ್ದಾನೆ. ನಾಗರ್‌ಕೋಯಿಲ್ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಕ್ಕೆ ಪಡೆದಿದ್ದಾರೆ.
ನವೀನ್​ ಸಾವಿಗೆ ಬೇರೆ ಇನ್ನೇನಾದರೂ ಕಾರಣ ಇರಬಹುದಾ ಎಂದು ಪೊಲೀಸರು ತನಿಖೆ ಶುರು ಮಾಡಿದ್ದಾರೆ.