ಬೆಲೆಬಾಳುವ ವಸ್ತುಗಳನ್ನು ಜೋಪಾನ ಮಾಡಬೇಕು ಎಂಬುದನ್ನು ಯಾರು ನಿರೀಕ್ಷೆ ಮಾಡಲ್ಲ? ಬ್ಯಾಂಕ್ ಲಾಕರ್ ಗಳಲ್ಲಿ ಬೆಲೆ ಬಾಳುವ ವಸ್ತುಗಳು, ಕಾಗದ- ಪತ್ರಗಳನ್ನು ಬಹಳ ಮಂದಿ ಬಯಸುತ್ತಾರೆ. ಅಂದ ಹಾಗೆ ಬ್ಯಾಂಕ್ ಗಳು ಒದಗಿಸುವ ಹಲವು ಸೇವೆಗಳಲ್ಲಿ ಲಾಕರ್ ವ್ಯವಸ್ಥೆಯೂ ಒಂದು. ಈ ಲಾಕರ್ ಗಳು ಸಣ್ಣ, ಮಧ್ಯಮ, ದೊಡ್ಡ ಹಾಗೂ ಅತಿದೊಡ್ಡ ಅಳತೆಯ ಲಾಕರ್ ಗಳು ದೊರೆಯುತ್ತವೆ.
ಅಂದ ಹಾಗೆ ಬ್ಯಾಂಕ್ ಲಾಕರ್ ಗಳ ಬಾಡಿಗೆ ಏನೂ ಕಡಿಮೆ ಅಲ್ಲ. ಯಾವ ಶಾಖೆಯಲ್ಲಿ ಲಾಕರ್ ಪಡೆದುಕೊಳ್ಳುತ್ತೀರಿ ಹಾಗೂ ಯಾವ ಅಳತೆಯದು ಎಂಬುದರ ಆಧಾರದಲ್ಲಿ ಬಾಡಿಗೆ ನಿರ್ಧಾರ ಆಗುತ್ತದೆ. ಈ ವರ್ಷದ ಮಾರ್ಚ್ 31ರಿಂದ ಭಾರತದಾದ್ಯಂತ ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಲಾಕರ್ ಶುಲ್ಕ ಹೆಚ್ಚಳ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಲಾಕರ್ ಶುಲ್ಕ ಕಡಿಮೆ ಇದೆ. ಅದರ ಮಾಹಿತಿ ಹೀಗಿದೆ.
1) SBI ಸಣ್ಣ ಲಾಕರ್ ಬಾಡಿಗೆ ಶುಲ್ಕ
ನಗರ ಮತ್ತು ಮೆಟ್ರೋ : 2000+Gst
ಗ್ರಾಮೀಣ ಮತ್ತು ಅರೆ ಪಟ್ಟಣ: 1500+Gst
2) SBI ಮಧ್ಯಮ ಗಾತ್ರದ ಲಾಕರ್ ಬಾಡಿಗೆ ಶುಲ್ಕ
ನಗರ ಮತ್ತು ಮೆಟ್ರೋ : 4000+Gst
ಗ್ರಾಮೀಣ ಮತ್ತು ಅರೆ ಪಟ್ಟಣ: 3000+Gst
3) SBI ದೊಡ್ಡ ಲಾಕರ್ ಬಾಡಿಗೆ ಶುಲ್ಕ
ನಗರ ಮತ್ತು ಮೆಟ್ರೋ: 8000+Gst
ಗ್ರಾಮೀಣ ಮತ್ತು ಅರೆ ನಗರ: 6000+Gst
4) SBI ಅತಿ ದೊಡ್ಡ ಲಾಕರ್ ಬಾಡಿಗೆ ಶುಲ್ಕ
ನಗರ ಮತ್ತು ಮೆಟ್ರೋ : 12000+Gst
ಗ್ರಾಮೀಣ ಮತ್ತು ಅರೆ ಪಟ್ಟಣ: 9000+Gst
5) ಒಂದು-ಸಲದ ಲಾಕರ್ ನೋಂದಣಿ ಶುಲ್ಕ
SBIನಿಂದ ಒದು ಸಲದ ಲಾಕರ್ ನೋಂದಣಿ ಶುಲ್ಕ 500 ಪ್ಲಸ್ GSTಯನ್ನು ಸಣ್ಣ ಮತ್ತು ಮಧ್ಯಮ ಗಾತ್ರದ ಲಾಕರ್ ಗಳಿಗೆ ಹಾಕಲಾಗುತ್ತದೆ. ಇನ್ನು ದೊಡ್ಡ ಹಾಗೂ ಅತಿ ದೊಡ್ಡ ಲಾಕರ್ ಗಳಿಗೆ 1,000 ಪ್ಲಸ್ GST ಪಾವತಿಸಬೇಕು.
6) ಲಾಕರ್ ಭೇಟಿ ಶುಲ್ಕಗಳು
ಎಲ್ಲ ಅಳತೆಯ ಲಾಕರ್ ಗಳಿಗೆ SBIನಿಂದ 12 ಭೇಟಿ ಉಚಿತವಿರುತ್ತದೆ. ಆ ನಂತರ, ಬ್ಯಾಂಕ್ ಶುಲ್ಕಗಳು ಪ್ರತಿ ಭೇಟಿಗೆ 100 ಪ್ಲಸ್ GST.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಾವಳಿ ಪ್ರಕಾರ, ವರ್ಷಕ್ಕ್ ಕನಿಷ್ಠ ಒಮ್ಮೆಯೂ ಲಾಕರ್ ಬಳಸದೆ ಇದ್ದಲ್ಲಿ ಅಂಥದ್ದನ್ನು ಬ್ಯಾಂಕ್ ಗಳು ತೆರೆಯಬಹುದು. ಆದರೆ ಬ್ಯಾಂಕ್ ಗಳು ಈ ಸಂಬಂಧವಾಗಿ ನೋಟಿಸ್ ಕಳುಹಿಸಬೇಕು. ಒಂದೋ ಬಳಸಿ ಅಥವಾ ಸರೆಂಡರ್ ಮಾಡಿ ಎಂದು ತಿಳಿಸಬೇಕು.