Monday, January 20, 2025
ಸುದ್ದಿ

ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ ಬೆಲೆ 75 ರೂ. ಹೆಚ್ಚಳ; ಇಂದಿನ ದರದ ಬಗ್ಗೆ ಇಲ್ಲಿದೆ ಮಾಹಿತಿ -ಕಹಳೆ ನ್ಯೂಸ್

ನವದೆಹಲಿ : ಎಲ್​ಪಿಜಿ ಗ್ಯಾಸ್​ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. 19 ಕೆಜಿ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ 75 ರೂ. ಹೆಚ್ಚಳವಾಗಿದೆ. ಈ ಮೂಲಕ ನವದೆಹಲಿಯಲ್ಲಿ 19 ಕೆಜಿ ಎಲ್​ಪಿಜಿ ಕಮರ್ಷಿಯಲ್ ಸಿಲಿಂಡರ್​ಗಳ ಬೆಲೆ 1,241 ರೂ. ಆಗಿದೆ. ಕಳೆದ ತಿಂಗಳು ಈ ಬೆಲೆ 1,166 ರೂ. ಆಗಿತ್ತು. ಈ ತಿಂಗಳ ಆರಂಭದಲ್ಲೇ ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ನೂತನ ಬೆಲೆ ಜಾರಿಗೆ ಬಂದಿದ್ದು, ದೇಶಾದ್ಯಂತ ಇದೇ ದರವನ್ನು ನಿಗದಿಪಡಿಸಲು ಈಗಾಗಲೇ ನಿರ್ಧರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬೆಲೆ ಏರಿಕೆ ಕೇವಲ ಕಮರ್ಷಿಯಲ್ ಸಿಲಿಂಡರ್​ಗಳಿಗೆ ಮಾತ್ರ ಅನ್ವಯವಾಗಲಿದೆ. 14.2 ಕೆಜಿ ತೂಕದ ಡೊಮೆಸ್ಟಿಕ್ ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಸಿಲಿಂಡರ್​ಗಳಿಗೆ ಪ್ರಸ್ತುತ 594 ರೂ.ಗಳಿವೆ. ಈಗಾಗಲೇ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಲಾಕ್​ಡೌನ್​ ಬಳಿಕ ಜಾಗತಿಕ ತೈಲ ಬೆಲೆಗಳ ಕುಸಿತ ಮತ್ತು ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳ ಕಂಡುಬಂದಿದ್ದರಿಂದ ಕೇಂದ್ರ ಸರ್ಕಾರ ಎಲ್​ಪಿಜಿ ಸಿಲಿಂಡರ್​ಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಸೆಪ್ಟೆಂಬರ್ 1ರಿಂದ ಸ್ಥಗಿತಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶಾದ್ಯಂತ 26.12 ಕೋಟಿಗೂ ಹೆಚ್ಚು ಎಲ್‌ಪಿಜಿ ಗ್ರಾಹಕರು ‘ಡೈರೆಕ್ಟ್‌ ಬೆನಿಫಿಟ್‌ ಟ್ರಾನ್ಸ್‌ಫರ್‌'(ನೇರ ವರ್ಗಾವಣೆ ಯೋಜನೆ) ಯೋಜನೆಯಡಿ ಸಬ್ಸಿಡಿ ಪಡೆಯುತ್ತಿದ್ದರು. ಇದಲ್ಲದೆ 18 ಕೋಟಿ ಗ್ರಾಹಕರು ಗ್ಯಾಸ್ ಸಿಲಿಂಡರ್‌ಗಳಿಗೆ ಯಾವುದೇ ಸಬ್ಸಿಡಿ ಪಡೆಯುತ್ತಿರಲಿಲ್ಲ. ಅಂದರೆ ದೇಶದಲ್ಲಿ ಸುಮಾರು 45 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ. ನವೆಂಬರ್ 1ರಿಂದ ನಾನಾ ನಗರಗಳಲ್ಲಿ ಜಾರಿಯಾಗಿರುವ ಎಲ್​ಪಿಜಿ ಸಿಲಿಂಡರ್​ಗಳ ಹೊಸ ದರದ ಬಗ್ಗೆ ಇಲ್ಲಿದೆ ಮಾಹಿತಿ.

19 ಕೆಜಿ ತೂಕದ ಕಮರ್ಷಿಯಲ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1,241 ರೂ, ಕೊಲ್ಕತ್ತಾದಲ್ಲಿ 1,296 ರೂ, ಮುಂಬೈನಲ್ಲಿ 1189 ರೂ, ಚೆನ್ನೈನಲ್ಲಿ 1354 ರೂ. ಆಗಿದೆ. 14.2 ಕೆಜಿ ತೂಕದ ಡೊಮೆಸ್ಟಿಕ್ ಸಿಲಿಂಡರ್​ಗಳ ಬೆಲೆ ದೆಹಲಿಯಲ್ಲಿ 594 ರೂ, ಕೊಲ್ಕತ್ತಾದಲ್ಲಿ 620.5 ರೂ, ಮುಂಬೈನಲ್ಲಿ 594 ರೂ, ಚೆನ್ನೈನಲ್ಲಿ 610 ರೂ. ಆಗಿದೆ.