Monday, January 20, 2025
ಹೆಚ್ಚಿನ ಸುದ್ದಿ

ರಾಮಮಂದಿರ ನಿರ್ಮಾಣ: ಖ್ಯಾತ ವಾಸ್ತುಶಿಲ್ಪಿ,ಸಂತರಿಂದ ಸಲಹೆ ಕೋರಿದ ಟ್ರಸ್ಟ್ -ಕಹಳೆ ನ್ಯೂಸ್

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶಾದ್ಯಂತ ವಾಸ್ತುಶಿಲ್ಪಿಗಳು ಮತ್ತು ಸಂತರ ಸಲಹೆಗಳನ್ನು ಆಹ್ವಾನಿಸಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಭಾನುವಾರ ತಿಳಿಸಿದ್ದಾರೆ. ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಲಿಮಿಟೆಡ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಲಿದೆ ಮತ್ತು ನಿರ್ಮಾಣ ಕಾರ್ಯಗಳಲ್ಲಿ ಲಾರ್ಸೆನ್ ಮತ್ತು ಟರ್ಬೋ (ಎಲ್ ಆಂಡ್ ಟಿ) ಸಹಾಯ ನೀಡಲಿದೆ ಎಂದು ಟ್ರಸ್ಟ್ ನಿರ್ಧರಿಸಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ಮುಂದಿನ ವರ್ಷ ಜನವರಿ 15 ರಿಂದ ಪ್ರಾರಂಭವಾಗುವ ರಾಮ ಮಂದಿರ ನಿರ್ಮಾಣದ ಬಗೆಗೆ 45 ದಿನಗಳ ಕಾಲ ಅಭಿಯಾನ ನಡೆಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಈ ಅಭಿಯಾನವು ಅಖಿಲ ಭಾರತ ಮಟ್ಟದ್ದಾಗಿರಲಿದೆಎಂದು ಟ್ರಸ್ಟ್ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನವೆಂಬರ್ 1 ರ ಭಾನುವಾರ ಅಯೋಧ್ಯೆಯ ಅತಿಥಿಗೃಹದಲ್ಲಿ ಟ್ರಸ್ಟಿಗಳು ಸಭೆ ಸೇರಿದ್ದು ಈ 45 ದಿನಗಳ ಅವಧಿಯಲ್ಲಿ ಸ್ವಯಂಸೇವಕರು ದೇಣಿಗೆ ಸಂಗ್ರಹಿಸಲು ಮನೆ-ಮನೆಗೆ ಭೇಟಿ ನೀಡುತ್ತಾರೆ ಎನ್ನಲಾಗಿದೆ. ಸಭೆಯಲ್ಲಿ ನಿರ್ಮಾಣ ಕಾರ್ಯವನ್ನು ನಿರ್ವಹಿಸಲು ಆಯ್ಕೆಯಾದ ಎಲ್ ಅಂಡ್ ಟಿ ಮತ್ತು ನಿರ್ಮಾಣದ ಮೇಲ್ವಿಚಾರಣೆಯನ್ನು ವಹಿಸುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯ ಪ್ರತಿನಿಧಿಗಳು ಹಾಜರಿದ್ದರು. ಸಭೆಯಲ್ಲಿ ಎರಡೂ ಕಂಪನಿಗಳು ಹಂಚಿಕೊಳ್ಳುವ ಜವಾಬ್ದಾರಿಗಳ ವಿವರಗಳನ್ನು ವಿವರವಾಗಿ ಚರ್ಚಿಸಲಾಗಿದೆ. ವಿವಿಧ ಬ್ಯಾಂಕುಗಳು ತಮ್ಮೊಂದಿಗೆ ಖಾತೆ ತೆರೆಯುವ ವಿನಂತಿಯೊಡನೆ ಗೆ ಟ್ರಸ್ಟ್ ಅನ್ನು ಸಂಪರ್ಕಿಸಿದ್ದವು, ಆದರೆ ಸಭೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಮಾತ್ರ ಖಾತೆ ತೆರೆಯಲು ಅನುಮತಿಸಿದೆ.

ಸಾಮಾನ್ಯವಾಗಿ ಎಂಜಿನಿಯರ್‌ಗಳು ಕಟ್ಟಡ ನಿರ್ಮಾಣದ ವಿಧಾನದ ಬಗ್ಗೆ ಸಭೆ ನಡೆಸಿ ಚರ್ಚಿಸುತ್ತಾರೆ ಆದರೆ ಈ ಸಂದರ್ಭದಲ್ಲಿ, ನಾಲ್ಕರಿಂದ ಐದು ಭಾರತೀಯ ವಾಸ್ತುಶಿಲ್ಪ ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು,

ಶ್ರೀ ಗೋವಿಂದ ದೇವಗಿರಿ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ನೃಪೇಂದ್ರ ಮಿಶ್ರಾ, ಚಂಪತ್ ರೈ ದಿನೇಶ್ ಚಂದ್ರ, ಡಾ ಅನಿಲ್ ಮಿಶ್ರಾ, ರಾಜ ವಿಮಲೇಂದ್ರ ಮಿಶ್ರಾ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ ಟ್ರಸ್ಟಿಗಳು ಸಂಜೆ 6 ರಿಂದ 7 ರ ನಡುವೆ ರಾಮ್ ಲಲ್ಲಾ ಪೂಜೆಯಲ್ಲಿ ಪಾಲ್ಗೊಂಡರು.

ಪೇಜಾವರ ಸ್ವಾಮೀಜಿ ಸೋಮವಾರ ನೈಮಿಶಾರಣ್ಯ , ಹರಿದ್ವಾರ ಮತ್ತು ಬದರಿನಾಥಕ್ಕೆ ಭೇಟಿ ನೀಡಲಿದ್ದು ಅಲ್ಲಿಂದ ಅವರು ನವೆಂಬರ್ 10 ಮತ್ತು 11 ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಭೇಟಿ ನೀಡಲಿದ್ದಾರೆ.