Monday, January 20, 2025
ಸುದ್ದಿ

ಶೀಘ್ರದಲ್ಲೇ ಕೇಂದ್ರದಿಂದ ಮತ್ತೊಂದು ‘ಆರ್ಥಿಕ ಉತ್ತೇಜಕ ಪ್ಯಾಕೇಜ್’ ಘೋಷಣೆ? -ಕಹಳೆ ನ್ಯೂಸ್

ನವದೆಹಲಿ: ಕರೊನಾ ಸೋಂಕು ಕಾರಣದ ಆರ್ಥಿಕ ಹಿಂಜರಿಕೆಯ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಮತ್ತೊಂದು ಆರ್ಥಿಕ ಉತ್ತೇಜಕ ಪ್ಯಾಕೇಜ್​ ಅನ್ನು ಸಿದ್ಧಗೊಳಿಸುತ್ತಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ದೇಶದಲ್ಲಿ ಕೋವಿಡ್ 19 ಪೂರ್ವದ ಸ್ಥಿತಿ ಮರಳಿದ್ದು ಅರ್ಥ ವ್ಯವಸ್ಥೆಯ ಚೇತರಿಕೆಗಾಗಿ ಮೋದಿ ಸರ್ಕಾರ ಮತ್ತೊಂದು ಆರ್ಥಿಕ ಉತ್ತೇಜಕ ಪ್ಯಾಕೇಜ್ ಅನ್ನು ಸಿದ್ಧಪಡಿಸುತ್ತಿದೆ. ಕೈಗಾರಿಕಾ ಸಂಸ್ಥೆಗಳು, ವಾಣಿಜ್ಯ ಸಂಘಟನೆಗಳು, ವಿವಿಧ ಸಚಿವಾಲಯ ಮತ್ತು ಪಾಲುದಾರರೊಂದಿಗೆ ಮಾತುಕತೆಗಳು ಮುಂದುವರಿದಿದೆ. ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಕಾಲಿಕವಾಗಿ ಅಗತ್ಯ ಕ್ರಮಗಳನ್ನು, ಪ್ಯಾಕೇಜ್​ಗಳನ್ನು ಸರ್ಕಾರ ಘೋಷಿಸಲಿದೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್​ ತಿಂಗಳ ಡೇಟಾವನ್ನು ಗಮನಿಸಿದರೆ ನಾವು ಈಗಾಗಲೇ ಕೋವಿಡ್ 19 ಪೂರ್ವದ ಸ್ಥಿತಿಗೆ ತಲುಪಿದ್ದು ಖಚಿತವಾಗುತ್ತಿದೆ. ಇದು ಧನಾತ್ಮಕ ಬೆಳವಣಿಗೆಯಾಗಿದ್ದು, ಇ-ವೇ ಬಿಲ್​ ಪಾವತಿಯನ್ನು ಹೋಲಿಸಿದರೂ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಶೇಕ10 ಮತ್ತು ಅಕ್ಟೋಬರ್​ನಲ್ಲಿ ಶೇಕಡ 21 ಹೆಚ್ಚಳವಾಗಿದೆ. ಜಿಎಸ್​ಟಿ ಸಂಗ್ರಹ ಕೂಡ ಮತ್ತೆ ಲಕ್ಷ ಕೋಟಿ ರೂಪಾಯಿ ಗಡಿ ದಾಟಿರುವುದು ಆಶಾದಾಯಕ ಎಂದು ಪಾಂಡೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು