Saturday, November 23, 2024
ಮೂಡಬಿದಿರೆ

ಕಂಬಳದಲ್ಲಿ ಮೂಡುಬಿದಿರೆ ತಾಲೂಕಿಗೆ 2 “ಕ್ರೀಡಾರತ್ನ” ಪ್ರಶಸ್ತಿ- ಕಹಳೆ ನ್ಯೂಸ್

ಮೂಡುಬಿದಿರೆ : ಜಾನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ಕಳೆದ 8 ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡು 2019-20ರಲ್ಲಿ ಕಂಬಳದ ಚಿನ್ನದ ಓಟಗಾರನೆಂದು ದಾಖಲೆಯನ್ನು ನಿರ್ಮಿಸಿ ರಾಷ್ಟ್ರ-ಅಂತರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಉಸೇನ್ ಬೋಲ್ಟ್ ಎಂದೇ ಕರೆಯಲ್ಪಟ್ಟ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಮತ್ತು ಇನ್ನೊರ್ವ ಕಂಬಳ ಸಾಧಕ ಪ್ರವೀಣ್ ಕೋಟ್ಯಾನ್ ಅಳಿಯೂರು ಅವರು “ಕ್ರೀಡಾರತ್ನ” ಪ್ರಶಸ್ತಿಗೆ ಆಯ್ಕೆ ಯಾಗಿದ್ದು ಈ ಮೂಲಕ ಇಬ್ಬರು ಓಟಗಾರರು ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಜ್ಯದಲ್ಲಿ ಮೂಡುಬಿದಿರೆ ತಾಲೂಕಿನ ಘನತೆಯನ್ನು ಹೆಚ್ಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀನಿವಾಸ ಗೌಡರು ಪ್ರತೀ ಕಂಬಳದಲ್ಲಿಯೂ 3 ಅಥವಾ 4 ಜೋಡಿ ಕೋಣಗಳನ್ನು ಓಡಿಸುತ್ತಿದ್ದರು. ಆದರೆ 2019-20ರಲ್ಲಿ ಬಂಗಾಡಿ ಕೊಲ್ಲಿಯಲ್ಲಿ 5 ಜೊತೆ ಕೋಣಗಳನ್ನು ಓಡಿಸಿದ್ದರೆ ಉಪ್ಪಿನಂಗಡಿಯ ಕಂಬಳದಲ್ಲಿ 6 ಜೊತೆ ಕೋಣಗಳನ್ನು ಓಡಿಸುವ ಮೂಲಕ ಅಲ್ಲೂ ದಾಖಲೆ ಯನ್ನು ನಿರ್ಮಿಸಿದ್ದರು. ಅಲ್ಲದೆ ಒಂದೇ ಸೀಸನ್‍ನಲ್ಲಿ 3 ಕಂಬಳಗಳಲ್ಲಿ ತಲಾ 4 ಬಹುಮಾನಗಳನ್ನು ಪಡೆದು ಹೊಸ ದಾಖಲೆಯನ್ನು ನಿರ್ಮಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿಯ ಕಂಬಳದಲ್ಲಿ ಶ್ರೀನಿವಾಸ ಗೌಡ ದಾಖಲೆ : ಬಾರಾಡಿ ಬೀಡು ಕಂಬಳದಲ್ಲಿ 5 ಬಹುಮಾನ, ಐಕಳದಲ್ಲಿ ನಡೆದ ಕಂಬಳದಲ್ಲಿ 142.50 ಮೀ. ದೂರವನ್ನು 13.44 ಸೆಕುಂಡು (100ಮೀ.ಗೆ 9.23ಗೆ)ಕ್ರಮಿಸಿದ್ದರು, 15 ಕಂಬಳಗಳಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ 14 ಪ್ರಥಮ, 1 ದ್ವಿತೀಯ ಸಹಿತ 15 ಬಹುಮಾನಗಳನ್ನು ಗೆದ್ದುಕೊಳ್ಳುವ ಮೂಲಕ ಈ ಹಿಂದೆ ಜಯಕರ ಮಡಿವಾಳ ಅವರು 13 ಕಂಬಳಗಳಲ್ಲಿ 13 ಪ್ರಥಮ ಬಹುಮಾನಗಳನ್ನು ಪಡೆದು ಅವರ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು.

ಶ್ರೀನಿವಾಸ ಗೌಡ ಅವರು ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದು 2019-20ನೇ ಸಾಲಿನಲ್ಲಿ ಆದರೆ ಈ ಎಲ್ಲಾ ಸಾಧನೆಗಳನ್ನು ಮಾಡುವ ಮೊದಲೆ ಅಂದರೆ 2017 ಸಾಲಿನಲ್ಲಿಯೇ ಸರಕಾರವು ಅವರ ಸಾಧನೆಯನ್ನು ಗುರುತಿಸಿ “ಕ್ರೀಡಾ ರತ್ನ” ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಆದರೆ ಯಾವುದೋ ಕಾರದಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಮುಂದೂಲ್ಪಟ್ಟಿದ್ದು ಇದೀಗ ಈ ವರ್ಷ “ಕ್ರೀಡಾ ರತ್ನ”ವನ್ನು ಸ್ವೀಕರಿಸುವ ಭಾಗ್ಯ ದೊರೆತಿದೆ.

ಪ್ರವೀಣ್ ಕೋಟ್ಯಾನ್

ಕಳೆದ 8 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಕೋಣಗಳನ್ನು ಓಡಿಸಿ ಸರಣಿ ಶ್ರೇಷ್ಠ ಬಹುಮಾನಗಳನ್ನು ಪಡೆಯುತ್ತಾ ಬಂದಿರುವ ಮೂಡುಬಿದಿರೆ ತಾಲೂಕಿನ ವಾಲ್ಪಾಡಿಯ ಪ್ರವೀಣ್ ಕೋಟ್ಯಾನ್ ಅವರು 2019 ಸಾಲಿನ “ಕ್ರೀಡಾ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಇಬ್ಬರು ಕಂಬಳ ಓಟಗಾರರು ಸೋಮವಾರ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.