ಬೆಂಗಳೂರು : ಶಾಲೆಗಳ ಪುನಾರಂಭದ ಬಗ್ಗೆ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಸಭೆ ಕರೆದಿದ್ದರು. ಶಾಲೆ ಆರಂಭದ ಕುರಿತು ಇಂದಿನಿಂದ ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿತ್ತು. ಆದರೆ, ಇಲಾಖೆಯ ಸರ್ವರ್ ಡೌನ್ ಆಗಿರುವ ಹಿನ್ನೆಲೆ ಸಭೆ ರದ್ದಾಗಿದೆ.
ಆಯಾ ಜಿಲ್ಲೆಗಳ ಉಪನಿರ್ದೇಶಕರು, ಬಿಇಓಗಳ ಜೊತೆಗೆ ವಿಡಿಯೋ ಸಂವಾದ ಮೂಲಕ ಸಭೆ ನಡೆಸಬೇಕಿತ್ತು. ಬೆಳಗ್ಗೆ 11ಗಂಟೆಗೆ ಸಭೆ ಆರಂಭವಾಗಬೇಕಿತ್ತಾದರೂ ತಾಂತ್ರಿಕ ಸಮಸ್ಯೆಯಿಂದ ಸಭೆಯನ್ನು ಮುಂದೂಡಲಾಗಿದೆ. ಇಂದು ನಿಗದಿಯಾಗಿದ್ದ ಸಭೆಯನ್ನು ನಾಳೆ ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.