Monday, January 20, 2025
ಹೆಚ್ಚಿನ ಸುದ್ದಿ

ಆರ್​ಸಿಬಿ ಗೆಲುವಿಗಾಗಿ ದೇವರಿಗೆ ರುದ್ರಾಭಿಷೇಕ -ಕಹಳೆ ನ್ಯೂಸ್

ರಾಯಚೂರು: ಐಪಿಎಲ್-13ರ ಹಂತದ ಕೊನೇ ಪಂದ್ಯ ಆಡಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದು, ಗೆಲುವಿಗಾಗಿ ದೇವರಿಗೆ ರುದ್ರಾಭಿಷೇಕವನ್ನೂ ಮಾಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್​ಸಿಬಿ ತಂಡ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಗೆದ್ದರೆ ಪ್ಲೇ-ಆಫ್ ಸ್ಥಾನ ಖಚಿತವಾಗಲಿದೆ. ಈ ಮಹತ್ವದ ಪಂದ್ಯ ಇಂದು (ಸೋಮವಾರ) ಸಂಜೆ 7.30ಕ್ಕೆ ಆರಂಭವಾಗಲಿದ್ದು, ಕೊಹ್ಲಿ ಟೀಂ ಗೆಲುವಿಗಾಗಿ ಆರ್‌ಸಿಬಿ ಅಭಿಮಾನಿಗಳು ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿದ್ದಾರೆ. ವಿಶೇಷ ಪ್ರಾರ್ಥನೆ ಸಲ್ಲಿಸಿ ರುದ್ರಾಭಿಷೆಕದ ರಶೀದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್-13ರ ತನ್ನ 13ನೇ ಪಂದ್ಯದಲ್ಲಿ ಆರ್‌ಸಿಬಿ ತಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ 5 ವಿಕೆಟ್‌ಗಳಿಂದ ಶರಣಾಗಿತ್ತು. ಅಂದಿನ ಪಂದ್ಯವನ್ನು ಆರ್​ಸಿಬಿ ಗೆದ್ದಿದ್ದರೆ ಪ್ಲೇಆಫ್ ಹಂತಕ್ಕೆ ಎಂಟ್ರಿ ಖಾತ್ರಿಯಾಗುತಿತ್ತು. ಸೋಲಿನ ನಡುವೆಯೂ ಆರ್‌ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಉಳಿಸಿಕೊಂಡಿದೆ. ಇಂದಿನ ಪಂದ್ಯ ಆರ್​ಸಿಬಿಗೆ ಪ್ಲೇಆಫ್​ ಹಂತದ ನಿರ್ಣಾಯಕ ಪಂದ್ಯವಾಗಿದ್ದು, ವಿರಾಟ್ ಕೊಹ್ಲಿ ಬಳಗ ಗೆಲುವು ಸಾಧಿಸಲೇಬೇಕೆಂದು ಅಭಿಮಾನಿಗಳು ದೇವರ ಮೊರೆಹೋಗಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಾನುವಾರ ನಾಯಕ ವಿರಾಟ್​ ಕೊಹ್ಲಿ, ಎಬಿ ಡಿವಿಲಿಯರ್ಸ್​, ದೇವದತ್​ ಪಡಿಕ್ಕಲ್, ಡೇಲ್​​ ಸ್ಟೇನ್​ ಮತ್ತು ಉಮೇಶ್​ ಯಾದವ್​ ಸೇರಿದಂತೆ ಎಲ್ಲ ಆಟಗಾರರೂ ಕನ್ನಡಿಗರಿಗೆ ಶುಭ ಕೋರಿದ್ದ ವಿಡಿಯೋವನ್ನು ಅಧಿಕೃತ ಆರ್​ಸಿಬಿ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿತ್ತು. ಕನ್ನಡಿಗರು ಕೂಡ ಆರ್​ಸಿಬಿಗೆ ರಾಜ್ಯೋತ್ಸವ ಮತ್ತು ಐಪಿಎಲ್​ ಗೆಲುವಿಗೆ ಶುಭಕೋರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು