Monday, January 20, 2025
ಹೆಚ್ಚಿನ ಸುದ್ದಿ

ಎಲ್ಪಿಜಿ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು -ಕಹಳೆ ನ್ಯೂಸ್

ನವದೆಹಲಿ: ಎಲ್ಪಿಜಿ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಬುಕ್ ಮಾಡಬಹುದಾಗಿದೆ. ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ವಿತರಣೆ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಲಿಂಡರ್ ಕಾಯ್ದಿರಿಸಲು ಇಂಡೇನ್ ಗ್ಯಾಸ್ ಗ್ರಾಹಕರ ಫೋನ್ ಸಂಖ್ಯೆ ಬದಲಾಗಿದೆ. ಇಂಡೇನ್ ಗ್ಯಾಸ್ ರಿಫಿಲ್ ಬುಕ್ ಮಾಡಲು ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಹೊಸ ಸಂಖ್ಯೆಯನ್ನು ಕಳಿಸಲಾಗಿದೆ. ಇದರ ಹೊರತಾಗಿ ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಾಯ್ದಿರಿಸಲು ವಿಧಾನಗಳು ಇಲ್ಲಿವೆ.

ಅನಿಲ ಸಂಸ್ಥೆ ಅಥವಾ ವಿತರಕರೊಂದಿಗೆ ಮಾತನಾಡುವ ಮೂಲಕ

ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೂಲಕ

https://iocl.com/Products/Indanegas.aspx ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಬುಕ್ಕಿಂಗ್ ಮಾಡಬಹುದು

ಕಂಪನಿಯ ವಾಟ್ಸಾಪ್ ಸಂಖ್ಯೆಯಲ್ಲಿ ಪಠ್ಯವನ್ನು ಕಳುಹಿಸುವ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು

ಇಂಡೇನ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೂಲಕ ಗ್ಯಾಸ್ ಬುಕ್ ಮಾಡಬಹುದಾಗಿದೆ.
ಇಂಡೇನ್ ಗ್ರಾಹಕರು ಈಗ 7718955555 ಸಂಖ್ಯೆಗೆ ಕರೆ ಮಾಡುವ ಮೂಲಕ ಎಲ್‌ಪಿಜಿ ಸಿಲಿಂಡರ್ ಕಾಯ್ದಿರಿಸಬಹುದು. ವಾಟ್ಸಾಪ್ ಮೆಸೆಂಜರ್‌ನಲ್ಲಿ REFILL ಎಂದು ಟೈಪ್ ಮಾಡಿ ಮತ್ತು ಅದನ್ನು 7588888824 ಗೆ ಕಳುಹಿಸಿ. ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ ಸಂದೇಶವನ್ನು ಕಳುಹಿಸಬೇಕಾಗುತ್ತದೆ.

ಮೊಬೈಲ್ ಸಂಖ್ಯೆಯನ್ನು ನವೀಕರಿಸದಿದ್ದರೆ ಗ್ಯಾಸ್ ವಿತರಿಸುವ ವ್ಯಕ್ತಿಯ ಬಳಿ ಮಾಹಿತಿ ಕೇಳಬಹುದು. ತಪ್ಪಾದ ಮಾಹಿತಿ ನೀಡಿದರೆ ಸಿಲಿಂಡರ್ ವಿತರಣೆ ನಿಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.