Monday, January 20, 2025
ಹೆಚ್ಚಿನ ಸುದ್ದಿ

ಖ್ಯಾತ ಪಿಟೀಲು ವಾದಕ ಟಿಎನ್ ಕೃಷ್ಣನ್ ನಿಧನ-ಕಹಳೆ ನ್ಯೂಸ್

ಚೆನ್ನೈ : ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಪಿಟೀಲು ವಾದಕ ಟಿ.ಎನ್. ಕೃಷ್ಣನ್ (92) ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಟಿ.ಎನ್. ಕೃಷ್ಣನ್ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷ್ಣನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ವೀಟರ್ ನಲ್ಲಿ ಕೃಷ್ಣನ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಖ್ಯಾತ ಪಿಟೀಲು ವಾದಕ ಶ್ರೀ ಟಿ.ಎಸ್. ಕೃಷ್ಣನ್ ಅವರ ನಿಧನವು ಸಂಗೀತ ಲೋಕದಲ್ಲಿ ದೊಡ್ಡ ನಷ್ಟವನ್ನುಂಟು ಮಾಡಿದೆ. ಅವರು ತಮ್ಮ ವಾದನದ ಮೂಲಕವೇ ನಮ್ಮ ಸಂಸ್ಕೃತಿಯ ವ್ಯಪಾಕವಾದ ಭಾವನೆಗಳನ್ನು ಮತ್ತು ಎಳೆಗಳನ್ನು ಸುಂದರವಾಗಿ ಬಿಡಿಸಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಸಾವಿನ ನೋವು ತಡೆಯುವ ಶಕ್ತಿ ದೊರೆಯಲಿ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.