Monday, January 20, 2025
ಪುತ್ತೂರು

ವಿವೇಕಾನಂದ ಪದವಿ ಕಾಲೇಜು ಹಾಗೂ ಶ್ರೀರಾಮ ಕಾಲೇಜು ಕಲ್ಲಡ್ಕ ಇದರ ಸಹಯೋಗದೊಂದಿಗೆ ವಿವೇಕಾನಂದ ಕಾಲೇಜಿನ ಭವಿಷ್ ಘಟಕದ ವಿದ್ಯಾರ್ಥಿಗಳಿಗೆ ಭೋದನಾ ಕೌಶಲ್ಯ ಕುರಿತಾದ ವರ್ಚುವಲ್ ಉಪನ್ಯಾಸ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ಸ್ವಾಮಿ ವಿವೇಕಾನಂದರನ್ನು ರೂಪಿಸಿದ ರಾಮಕೃಷ್ಣ ಪರಮಹಂಸ, ಅಬ್ದುಲ್ ಕಲಾಂ ರನ್ನು ರೂಪಿಸಿದ ರಾಮಸ್ವಾಮಿ ಹಾಗೂ ಹಕ್ಕಬುಕ್ಕರನ್ನು ತಯಾರು ಮಾಡಿದ ವಿದ್ಯಾರಣ್ಯರಂತಹ ಶ್ರೇಷ್ಠ ಗುರುಗಳ ಅವಶ್ಯಕತೆ ಪ್ರಸ್ತುತ ಸಮಾಜಕ್ಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣಪತಿ ಹೆಗಡೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ವಿವೇಕಾನಂದ ಪದವಿ ಕಾಲೇಜು ಹಾಗೂ ಶ್ರೀರಾಮ ಕಾಲೇಜು ಕಲ್ಲಡ್ಕ ಇದರ ಸಹಯೋಗದೊಂದಿಗೆ ವಿವೇಕಾನಂದ ಕಾಲೇಜಿನ ಭವಿಷ್ ಘಟಕದ ವಿದ್ಯಾರ್ಥಿಗಳಿಗೆ ನಡೆದ ಭೋದನಾ ಕೌಶಲ್ಯ ಕುರಿತಾದ ವರ್ಚುವಲ್ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ತ್ಯಾಗ ಹಾಗೂ ಸ್ವಯಂ ಸಮರ್ಪಣಾ ಭಾವ ಹೋಂದಿರುವ ಶಿಕ್ಷಕರನ್ನು ರೂಪಿಸುವ ಉದ್ದೇಶದಿಂದ ಸ್ಥಾಪನೆಯಾದ ಈ ಭವಿಷ್ ಘಟಕದಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವನ್ನಿಟ್ಟುಕೊಂಡಿದೆ ಎಂದು ಆಶಯದ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿರುವ ರಾಜೇಶ್ ಪದ್ಮಾರ್ ಮಾತನಾಡಿ, ಶಿಕ್ಷಕ ವೃತ್ತಿ ಎನ್ನುವುದು ಒಂದು ವ್ರತ ಅಲ್ಲದೇ ಒಬ್ಬ ಶಿಕ್ಷಕ ಸಮಾಜಕ್ಕೆ ಯೋಗ್ಯ ವ್ಯಕ್ತಿಯನ್ನು ರೂಪಿಸಬೇಕಾದರೆ ಆತ ಆರ್ಥಿಕ ಸಾಮಾಜಿಕ ಶಿಸ್ತುಗಳನ್ನು ಪಾಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೋ.ವಿ.ಜಿ ಭಟ್, ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಹಾಗೂ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್, ಭವಿಷ್ ಘಟಕದ ಸಂಯೋಜಕಿಯಾದ ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಲಾವಣ್ಯ ಸಿ.ಕೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ಕಲ್ಲಡ್ಕ ಶ್ರೀರಾಮ ಕಾಲೇಜಿನ ಭವಿಷ್ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಭವಿಷ್ ಘಟಕದ ಇನ್ನೋರ್ವ ಸಂಯೋಜಕಿ ಶ್ರೀಮತಿ ವಿಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು