Saturday, November 23, 2024
ಸುದ್ದಿ

ಹಿಂದೂ ಭಾವನೆಗಳಿಗೆ ಧಕ್ಕೆ – ಬಿಗ್ ಬಿ ಅಮಿತಾಬ್ ಬಚ್ಚನ್, ಕೆಬಿಸಿ ವಿರುದ್ಧ ಎಫ್.ಐ.ಆರ್. -ಕಹಳೆ ನ್ಯೂಸ್

ಮುಂಬೈ : ಕೌನ್ ಬನೇಗಾ ಕರೋಡ್​​ಪತಿ ಕಾರ್ಯಕ್ರಮದ ನಿರೂಪಕ ಬಿಗ್ ಬಿ ಅಮಿತಾಭ್​​ ಬಚ್ಚನ್ ಹಾಗು ಸೋನಿ ಟಿವಿ ಕಾರ್ಯಕ್ರಮದ ಮೇಕರ್ಸ್​​​​​ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕರಮ​ವೀರ್ ಎಂಬ ವಿಶೇಷ ಸಂಚಿಕೆಯಲ್ಲಿ ಬಿಗ್​ ಬಿ ಕೇಳಿದ ಪ್ರಶ್ನೆಯೊಂದಕ್ಕೆ ಎಫ್​ಐಆರ್​ ದಾಖಲಾಗಿದೆ. ಲಖನೌದಲ್ಲಿ ಅಮಿತಾಭ್​ ಬಚ್ಚನ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ವರದಿಯಾಗಿದೆ. ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಶುಕ್ರವಾರ ನಟ ಅನುಪ್ ಸೋನಿ ಮತ್ತು ಸಾಮಾಜಿಕ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್ ಎಂಬುವರು ಹಾಟ್​ ಸೀಟ್​ನಲ್ಲಿ ಕುಳಿತಿದ್ದರು. ಈ ವೇಳೆ ಅಮಿತಾಭ್ ಬಚ್ಚನ್ 6 ಲಕ್ಷದ 40 ಸಾವಿರ ರೂ.ನಗದು ಬಹುಮಾನಕ್ಕಾಗಿ ಪ್ರಶ್ನೆಯೊಂದನ್ನು ಕೇಳಿದರು. ಈ ಪ್ರಶ್ನೇ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಶ್ನೆ ಹೀಗಿತ್ತು –

ಜಾಹೀರಾತು
ಜಾಹೀರಾತು
ಜಾಹೀರಾತು

1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್​ ಹಾಗು ಮತ್ತವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು? ಆಯ್ಕೆಗಳು ಹೀಗಿವೆ –

ಎ. ವಿಷ್ಣುಪುರಾಣ
ಬಿ.ಭಗವದ್ಗೀತೆ
ಸಿ.ಋಗ್ವೇದ
ಡಿ.ಮನುಸ್ಮೃತಿ

ಸ್ಪರ್ಧಿಗಳು ಆಯ್ಕೆ ಡಿ. ಮನುಸ್ಮೃತಿಯನ್ನು ಉತ್ತರವಾಗಿ ಹೇಳಿದರು. ಇದು ಸರಿ ಉತ್ತರವೆಂದು ಘೋಷಿಸಿದ ಅಮಿತಾಭ್​ ಬಚ್ಚನ್, ಡಾ.ಬಿ.ಆರ್.ಅಂಬೇಡ್ಕರ್​ ಅವರು ಪ್ರಾಚೀನ ಹಿಂದೂ ಧರ್ಮ ಗ್ರಂಥದ ಪ್ರತಿಗಳನ್ನು ಖಂಡಿಸಿ ಸುಟ್ಟುಹಾಕಿದರು ಎಂದು ವಿವರಣೆ ನೀಡಿದ್ದಾರೆ.

ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹಾಗು ವಿರೋಧಕ್ಕೆ ಕಾರಣವಾಗಿದೆ. ನೆಟ್ಟಿಗರು ಟ್ವಿಟ್ಟರ್​ನಲ್ಲಿ ಕಾರ್ಯಕ್ರಮದ​ ವಿರುದ್ಧ ಕಿಡಿಕಾರಿದ್ದಾರೆ. ಸಿನಿಮಾ ನಿರ್ಮಾಪಕ ವಿವೇಕ್​ ಅಗ್ನಿಹೋತ್ರಿ ಟ್ವಿಟರ್​​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಇನ್ನು, ಕೆಲವು ನೆಟ್ಟಿಗರು ಇದನ್ನು ಎಡಪಂಥೀಯ ಪ್ರಚಾರ ಎಂದು ಕರೆದರೆ, ಮತ್ತೆ ಕೆಲವರು ಈ ಕಾರ್ಯಕ್ರಮವು ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಹೇಳಿದ್ದಾರೆ.