Tuesday, January 21, 2025
ಪುತ್ತೂರು

BREAKING NEWS:-ಚಿಕ್ಕಮಗಳೂರು ಪೊಲೀಸರ ಭರ್ಜರಿ ಬೇಟೆ, ಭಾರಿ ಪ್ರಮಾಣದ ಖೋಟಾ ನೋಟು , ಕಾರು ವಶ. ವಿಟ್ಲ , ಪುತ್ತೂರು ಮೂಲದ ನಾಲ್ವರು ಖದೀಮರ ಬಂಧನ- ಕಹಳೆ ನ್ಯೂಸ್

ಚಿಕ್ಕಮಗಳೂರು ಪೊಲೀಸರ ಭರ್ಜರಿ ಬೇಟೆ, ಭಾರಿ ಪ್ರಮಾಣದ ಖೋಟಾ ನೋಟು , ಕಾರು ವಶ. ವಿಟ್ಲ , ಪುತ್ತೂರು ಮೂಲದ ನಾಲ್ವರು ಖದೀಮರ ಬಂಧನ. ಕಿಂಗ್ ಪಿನ್ ಕರಾಯಿ ಜುಬೈರ್ ಗಾಗಿ ತೀವ್ರ ಶೋಧ. ಕಳಚಿಬಿದ್ದ ಸ್ವಯಂಘೋಷಿತ ಸಮಾಜಸೇವಕನ ಮುಖವಾಡ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಸರ್ಕಲ್ ಬಳಿ ಅನುಮಾನಾಸ್ಪದವಾಗಿ ಬರುತ್ತಿದ್ದ ಪುತ್ತೂರು ನೋಂದಣಿಯ ಮಾರುತಿ ಕಾರನ್ನು ತಡೆದ ಪೊಲೀಸರ ತಂಡ ತನಿಖೆ ನಡೆಸಿದಾಗ ಬರೋಬ್ಬರಿ 5,5೦ಲಕ್ಷ (500ರ ನೋಟುಗಳು) ನಕಲಿ ನೋಟುಗಳು ಪತ್ತೆಯಾಗಿದೆ. ಕಾರಿನಲ್ಲಿದ್ದ ಬೆಳ್ತಂಗಡಿಯ ಸಂತೋಷ್ ಮತ್ತು ಸುರತ್ಕಲ್ ನ ನಝೀರ್ ಎಂಬಿಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಅಂತರ್ರಾಜ್ಯ ಖೋಟಾನೋಟು ಜಾಲ ಬೆಳಕಿಗೆ ಬಂದಿದೆ. ದೇಶದ್ರೋಹ ಪ್ರಕರಣದ ಕಿಂಗ್ ಪಿನ್ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕರಾಯಿ ನಿವಾಸಿ ಹೆಚ್.ಎಂ.ಶಾಫಿ ಯಾನೆ ಹಸೈನಾರ್ ಪುತ್ರ ಕುಖ್ಯಾತ ಕ್ರಿಮಿನಲ್ ಜುಬೈರ್ ಪರಾರಿಯಾಗಿದ್ದಾನೆ. ಈತನ ಸಹೋದರ ಸ್ವಯಂಘೋಷಿತ ಸಾಮಾಜಿಕ ಕಾರ್ಯಕರ್ತ ಹೆಚ್. ಎಂ.ಖಾಲಿದ್, ಕೆಳಗಿನ ಬಾರೆಬೆಟ್ಟು ನಿವಾಸಿ ವಾಹನಚೋರ, ಅಡಿಕೆ ಕಳ್ಳ ಜಾಬಿರ್ ಎಂಬಿಬ್ಬರನ್ನು ಚಿಕ್ಕಮಗಳೂರು ಪೊಲೀಸರ ವಿಶೇಷ ತಂಡ ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಐವರನ್ನು ಬಂಧಿಸಬೇಕಾಗಿದ್ದು ಖದೀಮರ ಕರಾಳಮುಖ ಮತ್ತಷ್ಟೇ ಬಯಲಾಗಲಿದೆ.