Recent Posts

Sunday, January 19, 2025
ರಾಜ್ಯ

ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ : ‘ಮಾದಕ’ ನಟಿಯರಾದ ರಾಗಿಣಿ-ಸಂಜನಾಗೆ ಜೈಲೇ ಗತಿ..! -ಕಹಳೆ ನ್ಯೂಸ್

ಬೆಂಗಳೂರು- ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಪಾಲಾಗಿರುವ ಚಿತ್ರನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಅವರುಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.ಪ್ರಕರಣದ ಆರೋಪಿಗಳಾದ ಸಂಜನಾ , ರಾಗಿಣಿ ದ್ವಿವೇದಿ, ರಾಹುಲ್, ವೀರೇನ್ ಖನ್ನಾ, ಪ್ರಶಾಂತ್, ಅಭಿಸ್ವಾಮಿ ಅವರುಗಳ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಪರಪ್ಪನ ಅಗ್ರಹಾರದಲ್ಲಿ ಇನ್ನೂ ಕಾಲ ಕಳೆಯಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮಗೆ ಜಾಮೀನು ನೀಡಬೇಕೆಂದು ಪ್ರಕರಣದ ಆರು ಆರೋಪಿಗಳು ಹೈಕೋರ್ಟ್‍ನ ನ್ಯಾಯಮೂರ್ತಿ ಶ್ರೀ ಹರೀಶ್‍ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.ವಾದವಿವಾದ ಆಲಿಸಿದ್ದ ನ್ಯಾಯಾಲಯ ಕಳೆದ 24ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇಂದು ವಿಡಿಯೋ ಕಾನರೆನ್ಸ್ ಮೂಲಕ ಈ ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದರಿಂದ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವೊಂದೇ ಈಗ ಅವರಿಗಿರುವ ದಾರಿ. ಸುಪ್ರಿಂಕೋರ್ಟ್‍ಗೂ ಮೇಲ್ಮನವಿ ಅರ್ಜಿ ಹಾಕಿದರೂ ಕನಿಷ್ಠ ಪಕ್ಷ 15 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲೇ ಇರಬೇಕಾಗುತ್ತದೆ.

ಆರೋಪಿಗಳಿಗೆ ಯಾವುದೇ ಕಾರಣಕ್ಕೂ ನ್ಯಾಯಾಲಯ ಜಾಮೀನು ನೀಡಬಾರದೆಂದು ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು. ಪ್ರಕರಣದ ಇನ್ನು ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಸಹ ವಿಚಾರಣೆಗೊಳಪಡಿಸಬೇಕಾಗಿದೆ.

ವಿಚಾರಣಾ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕೆಂದು ಮನವಿ ಮಾಡಿದ್ದರು.

ಇದಕ್ಕೆ ಆಕ್ಷೇಪಿಸಿದ ಆರೋಪಿಗಳ ಪರ ವಕೀಲರು, ತಮ್ಮ ಕಕ್ಷಿದಾರರು ವಿಚಾರಣೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ವಿಚಾರಣಾಕಾರಿಗಳು ಕಳೆದ ಸಂದರ್ಭದಲ್ಲಿ ಹಾಜರಾಗಿದ್ದಾರೆ. ಮುಂದೆಯೂ ಕೂಡ ಕರೆದಾಗ ವಿಚಾರಣೆಗೆ ಬರುತ್ತಾರೆ. ನ್ಯಾಯಾಲಯ ಜಾಮೀನು ನೀಡಬೇಕೆಂದು ಕೋರಿದ್ದರು.

ಎರಡು ಕಡೆಯವರ ವಾದ-ವಿವಾದ ಆಲಿಸಿದ ನ್ಯಾಯಪೀಠ ಕಳೆದ 24ರಂದು ವಿಚಾರಣೆ ನಡೆಸಿ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಇನ್ನು ನ್ಯಾಯಾಲಯದಿಂದ ತಮಗೆ ಇಂದು ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಸಂಜನಾ ಮತ್ತು ರಾಗಿಣಿ ತೀರ್ಪು ಪ್ರಕಟವಾಗುತ್ತಿದ್ದಂತೆ ಕಣ್ಣೀರು ಹಾಕಿದರು ಎಂದು ತಿಳಿದುಬಂದಿದೆ.

ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಸದ್ದು ಮಾಡಿದ್ದ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಸಿಸಿಬಿ ಪೊಲೀಸರು ಅನೇಕರನ್ನು ಬಂಸಿ ಜೈಲಿಗಟ್ಟಿದ್ದಾರೆ.